ಗುಣಮಟ್ಟದ ಕಾಮಗಾರಿಯಿಂದ ಆರ್ಥಿಕ ಹೊರೆ ಕಡಿಮೆ

31102022 siraguppa bhomipuje
Published on

ಸಿರಗುಪ್ಪ: ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು. ಹಲವು ವರ್ಷಗಳವರೆಗೂ ಕಾಮಗಾರಿಗಳು ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.

ನಗರದ 24, 25, 29, 30 ಮತ್ತು 31ನೇ ವಾರ್ಡ್‌ನಲ್ಲಿ ಸಿಸಿ ಚರಂಡಿ ಮತ್ತು ಕಲ್ವರ್ಟ್ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ವಾರ್ಡ್‌ನಲ್ಲಿ 15ನೇ ಹಣಕಾಸು ಯೋಜನೆಯಡಿ 34 ಲಕ್ಷ ರೂ. ವೆಚ್ಚದಲ್ಲಿ ಸಿಸಿ ಚರಂಡಿ ಮತ್ತು ಕಲ್ವರ್ಟ್ ನಿರ್ಮಾಣ ಮಾಡುತ್ತಿದೆ. ಕಾಮಗಾರಿ ಸಂದರ್ಭ ಸಾರ್ವಜನಿಕರು ಗುಣಮಟ್ಟದ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನೆಮಾಡಬೇಕು. ಹಾಗಾದಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ಅವರು ಮಾಡುತ್ತಾರೆ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಕೆ.ಸುಶೀಲಮ್ಮ, ಮುಖಂಡರಾದ ಎಂ.ವೀರೇಶ, ಮಹಾದೇವ, ಎಸ್.ಮಲ್ಲಿಕಾರ್ಜುನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net