ಐಕ್ಯೂ ಇಂಟರ್‌ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

16 SND 02
ಬಳ್ಳಾರಿ ಬಸವರಾಜೇಶ್ವರಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ಹಾಗೂ ಗೋವಾ ಜೋನಲ್ ಲೆವೆಲ್‌ನಲ್ಲಿ ಸಿಂಧನೂರಿನ ಐಕ್ಯೂ ಇಂಟರ್‌ನ್ಯಾಷನಲ್ ಸ್ಕೂಲ್‌ನ ಬಾಲಕಿಯರ ತಂಡ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.
Published on

ಸಿಂಧನೂರು: ನಗರದ ಹೊರವಲಯದಲ್ಲಿರುವ ಐಕ್ಯೂ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಇತ್ತೀಚೆಗೆ ಬಳ್ಳಾರಿಯ ಬಸವರಾಜೇಶ್ವರಿ ಶಾಲೆಯಲ್ಲಿ 2025-26ನೇ ಸಾಲಿನ ಕರ್ನಾಟಕ ಹಾಗೂ ಗೋವಾ ಜೋನಲ್ ಲೆವೆಲ್ ಗುಂಪು ಆಟದ ಥ್ರೋಬಾಲ್, ವಾಲಿಬಾಲ್, ಖೋ ಖೋ, ಕರಾಟೆ ಚೆಸ್ ಸ್ಪರ್ಧೆ ನಡೆದವು. ಅಂಡರ್ 17 ವಿಭಾಗದ ಖೋ ಖೋ, ವಾಲಿಬಾಲ್, ಕಬಡ್ಡಿ ಸ್ಪರ್ಧೆಯಲ್ಲಿ ಬಾಲಕರ ತಂಡ ಪ್ರಥಮ ಸ್ಥಾನ, ಅಂಡರ್ 14 ವಿಭಾಗದ ಕಬಡ್ಡಿ ಯಲ್ಲಿ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net