ಐಕ್ಯೂ ಇಂಟರ್‌ನ್ಯಾಷನಲ್ ಶಾಲೆಗೆ ಶೇ.100 ಫಲಿತಾಂಶ

snd sslc
Published on

ಸಿಂಧನೂರು: ನಗರದ ಹೊರವಲಯದಲ್ಲಿರುವ ಐಕ್ಯೂ ಇಂಟರ್‌ನ್ಯಾಷನಲ್ ಶಾಲೆಗೆ 2024-25ನೇ ಸಾಲಿನ ಐಸಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.

ಪರೀಕ್ಷೆಗೆ ಹಾಜರಾದ ಶಾಲೆಯ ಎಲ್ಲ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 7 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕ ಪಡೆದರೆ, 35 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ಇನ್ನು ಉಳಿದ 12 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್‌ನಲ್ಲಿ ತೇರ್ಗಡೆಯಾಗಿದ್ದಾರೆ.

ಸುಮೇಧಾ ಎಸ್.ಎನ್. ಶೇ.98 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 3ನೇ ರ‌್ಯಾಂಕ್ ಪಡೆದಿದ್ದಾರೆ. ಸೌಜನ್ಯ ಎಚ್. ಶೇ.95.40, ಎಂ. ನೇಹಾ ಚೌಧರಿ ಶೇ.95 , ಧ್ರುವ ಎ.ನಿಹಾರ್ ಶೇ.94.40, ಮೋಕ್ಷಿತಾ ಸಾಯಿ ಎಸ್.ಕೆ. ಶೇ. 93.40, ಅಂಕಿತಾ ಶೇ.90.60, ನವ್ಯ ದೀಪಿಕಾ ಕೆ. ಶೇ. 90.20 ಅಂಕ ಗಳಿಸಿ ಶಾಲೆ ಹಾಗೂ ಪಾಲಕರಿಗೆ ಕೀರ್ತಿ ತಂದಿದ್ದಾರೆಂದು ಸಂಸ್ಥೆ ಅಧ್ಯಕ ರಾಮಚಂದ್ರರಾವ್ ಹಾಗೂ ಸುಗುಣ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net