ಕನ್ನಡ ಮಾಧ್ಯಮದವರೂ ಕೆಎಎಸ್​, ಐಎಎಸ್​ ಗೆಲ್ಲಬಹುದು; ಲೋಕಾ ಎಸ್​ಪಿ ಯಶೋಧಾ ಸಲಹೆ

h14-Womens Collage 4
Published on

ಹುಬ್ಬಳ್ಳಿ: ಮಾತೃ ಭಾಷೆ ಬಗ್ಗೆ ಕೀಳರಿಮೆ ಇಟ್ಟುಕೊಳ್ಳದೇ ಸ್ಪಷ್ಟ ಗುರಿ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಕನ್ನಡ ಮಾಧ್ಯಮದವರೂ ಕೆಎಎಸ್​, ಐಎಎಸ್​ನಂಥ ಪರೀೆಗಳನ್ನು ಗೆಲ್ಲಬಹುದು ಎಂದು ಬೆಳಗಾವಿ ಲೋಕಾಯುಕ್ತ ಎಸ್​ಪಿ ಯಶೋಧಾ ವಂಟಗೋಡಿ ವಿದ್ಯಾಥಿರ್ಗಳಿಗೆ ಸಲಹೆ ನೀಡಿದರು.
ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಜಗದ್ಗುರು ಮೂರುಸಾವಿರ ಮಠ ವಿದ್ಯಾವರ್ದಕ ಸಂಘದ ಕಲಾ ಹಾಗೂ ವಾಣಿಜ್ಯ ಮತ್ತು ಬಿಬಿಎ ಮಹಿಳಾ ಮಹಾವಿದ್ಯಾಲಯದ 53ನೇ ವಾಷಿರ್ಕ ಸ್ನೆಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ನಾನು ಕನ್ನಡ ಮಾಧ್ಯಮದಲ್ಲೇ ಶಾಲಾ& ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೇನೆ. ಕೆಎಎಸ್​ ಪರೀೆಯನ್ನು ಕನ್ನಡ ಮಾಧ್ಯಮದಲ್ಲೇ ಬರೆದು ಪಾಸಾಗಿದ್ದೇನೆ. ಕನ್ನಡ ಮಿಡಿಯಂ, ರೂರಲ್​, ಆರ್ಟ್ಸ್​ ಹಿನ್ನೆಲೆಯವರು ಎಂಬ ಕೀಳರಿಮೆ ಇಟ್ಟುಕೊಳ್ಳದೇ ಸ್ಪಷ್ಟ ಗುರಿ ಇಟ್ಟುಕೊಂಡು ಅಗತ್ಯವಾದ ತಯಾರಿ ಮಾಡಿಕೊಳ್ಳಬೇಕು. ಮಕ್ಕಳು ಪಾಲಕರನ್ನು, ಪಾಲಕರು ಮಕ್ಕಳನ್ನು ಮತ್ತೊಬ್ಬರಿಗೆ ಹೋಲಿಕೆ ಮಾಡಬಾರದು ಎಂದರು.
ನೌಕರಿ ಪಡೆಯುವುದೇ ಯಶಸ್ಸು ಅಲ್ಲ. ಗೃಹಿಣಿಯಷ್ಟು ಪವಿತ್ರವಾದ ಸ್ಥಾನ ಮತ್ತೊಂದಿಲ್ಲ. ನಮ್ಮ ತಂದೆ& ತಾಯಿ ನಮಗೆ ಪ್ರೀತಿ, ವಾತ್ಸಲ್ಯವನ್ನು ಧಾರೆ ಎರೆದಿದ್ದಾರೆ. ಅವರ ತ್ಯಾಗದಿಂದಾಗಿ ನಾವು ಸುಂದರ ಬದುಕು ಕಟ್ಟಿಕೊಳ್ಳುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಇತ್ತೀಚೆಗೆ ಬಹುತೇಕ ವಿದ್ಯಾಥಿರ್ಗಳು ಮೊಬೈಲೇ ಜೀವನ ಅಂದುಕೊಂಡಿದ್ದಾರೆ. 24 ತಾಸು ಅದರಲ್ಲೇ ಮುಳುಗಿ ಬಿಡುತ್ತಾರೆ. ಏನಾದರೂ ಅನಾಹುತ ನಡೆದಾಗ ಪೊಲೀಸರ ಬಳಿ ಬರುತ್ತಾರೆ. ಮೊಬೈಲ್​ ಎಷ್ಟು ಬೇಕೋ ಅಷ್ಟು ಮಾತ್ರ ಬಳಸಬೇಕು. ಯಾವಾಗಲೂ ಗುರಿ ಕಡೆಗೆ ಮಾತ್ರ ಗಮನಹರಿಸಬೇಕು ಎಂದರು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಸ್ವಾತಂತ್ರ$್ಯಪೂರ್ವದಿಂದಲೂ ನಮ್ಮ ಪೂರ್ವಜರು ತಿಳಿಸಿಕೊಟ್ಟಿದ್ದಾರೆ. ಫ್ಯಾಷನ್​ ಯುಗದಲ್ಲೂ ಪ್ಯಾಶನ್​ ಮರೆಯದಿರಿ. ಮೌಲ್ಯಗಳೊಂದಿಗೆ ಬದುಕಿ. ಸಾಂಸತಿಕ ಲೋಕ ನೈತಿಕ ಲೋಕಕ್ಕೆ ಕೊಡುಗೆಯಾಗಿದೆ ಎಂದರು.
ನಿವೃತ್ತ ಶಿಕ್ಷಕರಿಗೆ ಹಾಗೂ ರ್ಯಾಂಕ್​ ಪಡೆದ ವಿದ್ಯಾಥಿರ್ನಿಯರನ್ನು ಸನ್ಮಾನಿಸಲಾಯಿತು. ನಂತರ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಎಸ್​.ನಾವಿ, ಜ.ಮೂ.ವಿ. ಸಂದ ಸದಸ್ಯ ಸದಾನಂದ ಡಂಗನವರ, ಪ್ರಾಚಾರ್ಯ ಡಾ.ಲಿಂಗರಾಜ ಅಂಗಡಿ, ಡಾ.ಶಿವಲೀಲಾ ವೈಜಿನಾಥ, ಮಮತಾ ಅಣ್ಣಿಗೇರಿ, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net