ಐಪಿಎಸ್ ಅಧಿಕಾರಿಗಳಿಂದ ಡ್ಯಾನ್ಸ್

Police dance
Published on

ಮಂಗಳೂರು: ಐಪಿಎಸ್ ಆಧಿಕಾರಿಗಳಾದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ಸೋಮವಾರ ಜತೆಯಾಗಿ ಡ್ಯಾನ್ಸ್ ಮಾಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ದೈಹಿಕ ಸಾಮರ್ಥ್ಯ ಬಲವರ್ಧನೆ ಹಾಗೂ ದೈಹಿಕ ಸದೃಢತೆ ಕಾರ್ಯಾಗಾರದ ಸಮಾರೋಪದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಲುಂಗಿ ಡ್ಯಾನ್ಸ್ ಸಹಿತ ಭರ್ಜರಿ ಸ್ಟೆಪ್ ಹಾಕಿದರು.

ಆಯುಕ್ತರು ಹಾಗೂ ಡಿಸಿಪಿ ಸಿಬ್ಬಂದಿ ಜತೆ ಮಾಡಿರುವ ಡ್ಯಾನ್ಸ್‌ಗೆ ಪ್ರೇಕ್ಷಕರಿಂದ ಶಿಳ್ಳೆ, ಕರತಾಡನ ವ್ಯಕ್ತವಾಯಿತು. ಬಳಿಕ ಆಯುಕ್ತರು ಹಾಡುಗಳನ್ನು ಹಾಡಿ ರಂಜಿಸಿದರು. ಚಿತ್ರಗೀತೆಗಳಿಗೆ ಪ್ರೇಕ್ಷಕರೂ ಸ್ಟೆಪ್ ಹಾಕಿ ಸಂಭ್ರಮಿಸಿದರು. ಕೆಲದಿನಗಳ ಹಿಂದೆ ಪೊಲೀಸ್ ಕ್ರೀಡೋತ್ಸವ ಸಂದರ್ಭ ಆಯುಕ್ತರು ಹಾಡು ಹಾಡಿ, ಡ್ಯಾನ್ಸ್ ಮಾಡಿ ಸಿಬ್ಬಂದಿಗೆ ಉತ್ಸಾಹ ತುಂಬಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net