ಹುಬ್ಬಳ್ಳಿ: ಇನ್ಸ್ಟಿಟ್ಯೂಷನ್ ಆಫ್ ವ್ಯಾಲ್ಯುಯರ್ಸ್ (ಮೌಲ್ಯಮಾಪಕರ ಸಂಸ್ಥೆ) ಹುಬ್ಬಳ್ಳಿ ಶಾಖೆ ವತಿಯಿಂದ ಅ. 12ರಂದು ಬೆಳಗ್ಗೆ 10 ಗಂಟೆಗೆ ದೇಶಪಾಂಡೆನಗರ ಕರ್ನಾಟಕ ಜಿಮ್ಖಾನಾ ಕ್ಲಬ್ನಲ್ಲಿ ಮೌಲ್ಯಮಾಪಕರ ದಿನಾಚರಣೆ ಹಾಗೂ ಸಮಾವೇಶ ಆಯೋಜಿಸಲಾಗಿದೆ.
ಬ್ಯಾಂಕ್ ಆಫ್ ಬರೋಡಾ ಹುಬ್ಬಳ್ಳಿ ವಲಯದ ಡಿಜಿಎಂ ವಿ. ಶ್ರೀಹರಿ, ಲೆಕ್ಕ ಪರಿಶೋಧಕ ನಟರಾಜ ಮುರಶಿಳ್ಳಿ, ಇನ್ಸ್ಟಿಟ್ಯೂಷನ್ ಆಫ್ ವ್ಯಾಲ್ಯುಯರ್ಸ್ ನೈಋತ್ಯ ವಲಯ ಕೋ-ಆರ್ಡಿನೇಟರ್ ಜಿ.ಎಸ್. ಅಂಗಡಿ ಪಾಲ್ಗೊಳ್ಳುವರು. ಹಿರಿಯ ಮೌಲ್ಯಮಾಪಕ ಎಚ್.ಕೆ. ಶರ್ಮಾ ಮುಖ್ಯ ಭಾಷಣ ಮಾಡುವರು. ಎಚ್.ಎಂ. ಕುಮಾರ ಅಧ್ಯಕ್ಷತೆ ವಹಿಸುವರು.