ಅಯೋಡಿನ್ ಕೊರತೆಯಿಂದ ರೋಗ ಉಲ್ಬಣ

23 DVD 03
ದೇವದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮದಲ್ಲಿ ಟಿಎಚ್‌ಒ ಡಾ.ಬನದೇಶ್ವರ ಮಾತನಾಡಿದರು. ಆರೋಗ್ಯ ಇಲಾಖೆ ಅಧಿಕಾರಿಗಳಾದ ಸೂಗೂರಪ್ಪ, ಶಿವಪ್ಪ, ಶ್ರೀನಿವಾಸ ದೊಡ್ಡಮನಿ, ಬಾನು, ರಾಜು, ಮಹೇಂದ್ರ, ಶಾರೋನ್, ಚನ್ನಬಸಯ್ಯ ಇತರರಿದ್ದರು.
Published on

ದೇವದುರ್ಗ: ಸೇವಿಸುವ ಆಹಾರದಲ್ಲಿ ಅಯೋಡಿನ್ ದೊರಕಬೇಕು. ಅಯೋಡಿನ್ ಕೊರತೆಯಿಂದ ಥೈರಾಯ್ಡ ಗ್ರಂಥಿಯ ಸಮಸ್ಯೆ ಎದುರಾಗಲಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಅಯೋಡಿನ್ ನಮ್ಮ ದೇಹಕ್ಕೆ ಬೇಕಾದ ಒಂದು ಸೂಕ್ಷ್ಮ ಪೋಷಕಾಂಶ. ಗರ್ಭದಲ್ಲಿ ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಇದು ಅವಶ್ಯಕ. ಆಹಾರ ಪದಾರ್ಥಗಳಲ್ಲಿ ದೊರೆಯುವ ಅಯೋಡಿನ್ ಪ್ರಮಾಣ ಅವುಗಳನ್ನು ಬೆಳೆಯುವ ನೆಲದಲ್ಲಿರುವ ಅಂಶವನ್ನು ಅವಲಂಬಿಸಿರುತ್ತದೆ. ಅಯೋಡಿನ್ ಅಂಶ ಉಪ್ಪು, ಮೀನು, ಸಿಗಡಿ, ವಿಡ್ಸ್‌ನಲ್ಲಿ ಹಾಗೂ ಹಸಿರು ತರಕಾರಿ ಸೊಪ್ಪುಗಳಲ್ಲಿ ಇರುತ್ತದೆ.

ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ದೈಹಿಕ ಹಾಗೂ ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆ, ಮೂಕತನ, ಮಳ್ಳಿಗಣ್ಣು, ವಯಸ್ಕರಲ್ಲಿ ನಿಶಕ್ತಿ, ಗಳಗಂಡ ರೋಗ, ಗರ್ಭಿಣಿಯರಲ್ಲಿ ಪದೇ ಪದೆ ಗರ್ಭಪಾತ, ನಿರ್ಜೀವ ಮಕ್ಕಳ ಸಂಖ್ಯೆ ಹೆಚ್ಚಳ ಹಾಗೂ ಸಂತಾನೋತ್ಪತ್ತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಒಂದು ದಿನಕ್ಕೆ ವಯಸ್ಕರಿಗೆ 150 ಎಂಜಿ, ಗರ್ಭಿಣಿ ಮತ್ತು ಬಾಣಂತಿಗೆ 200 ಎಂಜಿ, ಜೀರೋದಿಂದ 11ತಿಂಗಳ ಮಕ್ಕಳಿಗೆ 50, 12ರಿಂದ 59 ತಿಂಗಳ ಮಕ್ಕಳಿಗೆ 90ಎಂಜಿ, ಶಾಲಾ ಮಕ್ಕಳಿಗೆ 120 ಎಂಜಿ ಪ್ರತಿದಿನ ಅಯೋಡಿನ್ ಬೇಕಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net