

ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ(ಐಒಸಿಎಲ್) ವಿಶ್ವ ದರ್ಜೆಯ ಪೆಟ್ರೋಲ್‌ನ್ನು (100 ಆಕ್ಟೇನ್) ಚಿಲ್ಲರೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಪೆಟ್ರೋಲಿಯಂ ಮತ್ತು ನೈಸಗಿಕ ಅನಿಲ ಹಾಗೂ ಉಕ್ಕಿನ ಸಚಿವ ಧರ್ಮೇಂದ್ರ ಪ್ರಧಾನ್, ಇತ್ತೀಚಿಗಷ್ಟೇ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಎಕ್ಸ್‌ಪಿ 100 ಬ್ರಾಂಡ್‌ನ ಪ್ರೀಮಿಯಂ ದರ್ಜೆಯ ಪೆಟ್ರೋಲ್ ಅನಾವರಣಗೊಳಿಸಿ, ಇಂಧನ ಪರಿಹಾರಗಳನ್ನು ಒದಗಿಸಲು ಎಕ್ಸ್‌ಪಿ 100ನಂತಹ ವಿಶ್ವ ದರ್ಜೆಯ ಉತ್ಪನ್ನ ಸಹಕಾರಿಯಾಗಲಿದೆ. ಪ್ರಾಯೋಗಿಕವಾಗಿ ದೇಶದ ಹತ್ತು ನಗರಗಳಲ್ಲಿ ಈ ಉತ್ಪನ್ನ ದೊರೆಯಲಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ದೇಶಾದ್ಯಂತ ವಿಸ್ತರಿಸಲಾಗುವುದು ಎಂದರು.
ಐಒಸಿಎಲ್ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ಮಾತನಾಡಿ, ಹೊಸ ದರ್ಜೆಯ ಉತ್ಪನ್ನವು ವಾಹನಗಳಿಗೆ ಹೆಚ್ಚಿನ ಶಕ್ತಿ ಹಾಗೂ ಕಾರ್ಯಕ್ಷಮತೆ ನೀಡಲಿದೆ. ಬೈಕ್ ಹಾಗೂ ಕಾರುಗಳ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಮೊದಲ ಬಾರಿಗೆ ವಿಶ್ವ ದರ್ಜೆಯ ಪೆಟ್ರೋಲ್ ಬಿಡುಗಡೆ ಮಾಡಿದ ಕಂಪನಿ ಇಂಡಿಯನ್ ಆಯಿಲ್. ಮೊದಲ ಹಂತದಲ್ಲಿ ದೆಹಲಿ, ಗುರಗಾಂವ್, ನೋಯ್ಡ, ಆಗ್ರಾ, ಜೈಪುರ, ಲುಧಿಯಾನ, ಮುಂಬೈ, ಪುಣೆ ಮತ್ತು ಅಹಮದಾಬಾದ್‌ನಲ್ಲಿ ಎಕ್ಸ್‌ಪಿ 100 ಬ್ರಾಂಡ್‌ನ ಪೆಟ್ರೋಲ್ ಸಿಗಲಿದೆ. ಎರಡನೇ ಹಂತದಲ್ಲಿ ಚೆನ್ನೈ, ಹೈದರಾಬಾದ್, ಬೆಂಗಳೂರು, ಭುವನೇಶ್ವರ್ ಹಾಗೂ ಕೋಲ್ಕತದಲ್ಲಿ ಬಿಡುಗಡೆ ಮಾಡಲಾಗುವುದು. ಮಥುರಾ ರಿಫೈನರಿಯಲ್ಲಿ ಈ ಉತ್ಪನ್ನವನ್ನು ಉತ್ಪಾದಿಸಲಾಗುತ್ತಿದೆ.