ಅಪಾಯಕ್ಕೆ ಆಹ್ವಾನಿಸುತ್ತಿದೆ ವಿದ್ಯುತ್ ಪರಿವರ್ತಕ

28MDG2 AYYO PROBLEM
Published on

ಮುಂಡರಗಿ: ಪಟ್ಟಣದ ಬಂಡಾಯ ಭೀಮರಾವ್ ವೃತ್ತದ (ಕೊಪ್ಪಳ ಸರ್ಕಲ್) ಸಮೀಪದ ಕೊಪ್ಪಳ ರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಪರಿವರ್ತಕ (ಟಿಸಿ) ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಹೆಚ್ಚಿದೆ.

ಕೊಪ್ಪಳಕ್ಕೆ ತೆರಳುವ ಮುಖ್ಯರಸ್ತೆಯು ಇದಾಗಿದ್ದರಿಂದ ನಿತ್ಯ ಇಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಈ ಭಾಗದಲ್ಲಿ ಹೆಚ್ಚಾಗಿ ಮನೆಗಳಿದ್ದು, ಸಾರ್ವಜನಿಕರ ಓಡಾಟ ತುಸು ಹೆಚ್ಚಿರುತ್ತದೆ. ವಿದ್ಯುತ್ ಪರಿವರ್ತಕ ಇರುವ ಭಾಗದಲ್ಲಿ ಮುಖ್ಯರಸ್ತೆಯು ಕಿರಿದಾಗಿದ್ದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಹಾಗೆಯೇ ಇಲ್ಲಿ ವ್ಯಾಪಾರದ ಮಳಿಗೆಗಳಿದ್ದು ಗ್ರಾಹಕರಿಗೂ ತೊಂದರೆಯಾಗುತ್ತದೆ. ಪಕ್ಕದಲ್ಲೇ ತೆಂಗಿನಗಿಡ ಗಿಡವಿದ್ದು, ಅದರ ಗರಿಗಳು ತಂತಿಗೆ ತಾಗಿ ವಿದ್ಯುತ್ ಪರಿವರ್ತಕದಲ್ಲಿ ಆಗಾಗ ಬೆಂಕಿ ಕಿಡಿ ಹಾರುತ್ತದೆ. ಒಟ್ಟಾರೆ ಇಲ್ಲಿನ ಜನರಿಗೆ ಭಯದ ವಾತಾವರಣವಿದೆ. ಸಂಬಂಧಪಟ್ಟ ಹೆಸ್ಕಾಂ ಇಲಾಖೆಯು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅಗತ್ಯವಿದೆ.

ವಿದ್ಯುತ್ ಪರಿವರ್ತಕ ಅಪಾಯಕಾರಿ ಸ್ಥಿತಿಯಲ್ಲಿದ್ದು ಅದನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎನ್ನುವುದು ಈ ಭಾಗದ ಸಾರ್ವಜನಿಕರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net