ಭದ್ರಾ ಜಲಾಶಯಕ್ಕೆ ಡಿಶಿಕೆಗೆ ಆಹ್ವಾನ: ಮಧು ಬಂಗಾರಪ್ಪ

minister madhu bangarappa
ಸಚಿವ ಮಧು ಬಂಗಾರಪ್ಪ
Published on

ಶಿವಮೊಗ್ಗ: ಭದ್ರಾ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಹಾಗಾಗಿ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭದ್ರಾ ಜಲಾಶಯಕ್ಕೆ ಆಹ್ವಾನಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ತುಂಗಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಭದ್ರಾದಿಂದಲೂ ನೀರು ಬಿಟ್ಟರೆ ಹೊನ್ನಾಳಿ, ಹಾವೇರಿ ಭಾಗದಲ್ಲಿ ಸಮಸ್ಯೆ ಉದ್ಭವವಾಗಲಿದೆ. ಆ ನಿಟ್ಟಿನಲ್ಲಿ ನೀರು ಹರಿಸುವ ಬಗ್ಗೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net