

ಮೈಸೂರು: ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಡಾ. ವಸುಂಧರಾ ದೊರೆಸ್ವಾಮಿ ಅವರನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಏರ್ಪಡಿಸಿರುವ ಸಮಾರಂಭದಲ್ಲಿ ನೃತ್ಯ ಕಾರ್ಯಕ್ರಮ ನೀಡಲು ಆಹ್ವಾನಿಸಿದೆ.
ಡಾ.ವಸುಂಧರಾ ದೊರೆಸ್ವಾಮಿ ತಂಡದವರು ಜ.25 ರಂದು 40 ನಿಮಿಷಗಳ ಕಾಲ ಭರತನಾಟ್ಯ ನೃತ್ಯವನ್ನು ಪ್ರಸ್ತುತ ಪಡಿಸಲಿದ್ದಾರೆ. ಡಾ.ವಸುಂಧರಾ ದೊರೆಸ್ವಾಮಿ ತಂಡದಲ್ಲಿ ಅವರ ಶಿಷ್ಯರಾದ ವಿದುಷಿ ಡಾ.ಲಕ್ಷ್ಮೀ ರೇಖಾ ಅರುಣ್, ವಿದುಷಿ. ಮೈತ್ರೆಯೀ ಗುರುರಾಜ, ವಿದುಷಿ ವಿಭಾ ದಿವಾಕರ, ವಿದ್ವಾನ್ ಸುಜಯ್ ಶಾನಭಾಗ್, ವಿದುಷಿ ದೀಪ್ತಿ ಆದಿಶೇಷ ಹಾಗೂ ವಿದುಷಿ ಸೌಂದರ್ಯ ಪಣಪಿಲ್ ಇದ್ದಾರೆ.