ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಿಗೆ ಆಮಂತ್ರಣ

11Koppa02
Published on

ಕೊಪ್ಪ:ತಾಲೂಕು ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ, ಹಿರಿಯ ಪತ್ರಕರ್ತ ಎಚ್.ಎಂ.ರವಿಕಾಂತ್ ಅವರನ್ನು ಅವರ ಸ್ವಗೃಹದಲ್ಲಿ ಗೌರವದೊಂದಿಗೆ ಆಮಂತ್ರಣ ನೀಡಲಾಯಿತು.

ನ.17ರಂದು ಪಟ್ಟಣದ ಪುರಭವನದಲ್ಲಿ ನಡೆಯುವ ಪ್ರಥಮ ತಾಲೂಕು ಮಟ್ಟದ ಜಾನಪದ ಸಮ್ಮೇಳನದ ಸಮ್ಮೇಳಾನಧ್ಯಕ್ಷರಾಗಿ ತಾಲೂಕಿನ ಹಿರಿಯ ಸಾಹಿತಿ, ಪತ್ರಕರ್ತ, ಚಿಂತಕರಾದ ಎಚ್.ಎಂ.ರವಿಕಾಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಎಚ್.ಎಂ.ರವಿಕಾಂತ್ ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಹಿರೇಕೊಡಿಗೆ ಗ್ರಾಪಂ ಅಧ್ಯಕ್ಷರಾಗಿ, ಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ, ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾಗಿ, ಮೈಸೂರು ಅಬ್ದುಲ್‌ನಜೀರ್ ಸಾಬ್ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ತರಬೇತಿ ಕೇಂದ್ರದ ಸಂಪಲ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸ್ವತಃ ಕವಿಯಾಗಿರುವ ರವಿಕಾಂತ್ 50ಕ್ಕೂ ಧ್ವನಿ ಸುರುಳಿಗಳನ್ನು ಪ್ರಕಟಿಸಿದ್ದಾರೆ ಎಂದು ಸಮ್ಮೇಳನ ಗೌರವಾಧ್ಯಕ್ಷ ಎಸ್.ಎನ್ ರಾಮಸ್ವಾಮಿ ತಿಳಸಿದರು.

ಈ ಸಮ್ಮೇಳನ ಮಲೆನಾಡ ಜಾನಪದವನ್ನು ಮುಂದಿನ ಪೀಳಿಗೆಗ ಪರಿಚಯಿಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ನಮ್ಮ ತಾಲೂಕಿನಲ್ಲಿರುವ ಜಾನಪದ ಕಲಾವಿದರನ್ನು ಗುರುತಿಸುವ ಸಲುವಾಗಿ ಜಾನಪದ ನೃತ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕು ಕಜಾಪ ಅಧ್ಯಕ್ಷ ಬಿ.ಹೆಚ್ ದಿವಾಕರ್ ಭಟ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಕರವೇ ಅಧ್ಯಕ್ಷ ಪ್ರಾನ್ಸಿಸ್ ಕಾಡೋಜ, ಕೊಪ್ಪ ಗ್ರಾಮಾಂತರ ಗ್ರಾಪಂ ಸದಸ್ಯೆ ಶೃತಿ ರೋಹಿತ್, ಶಶಿಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net