ಅಜ್ಜಂಪುರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಆಹ್ವಾನ

14KDR4
ಅಜ್ಜಂಪುರ ತಾಲೂಕು ಸಮ್ಮೇಳನಾಧ್ಯಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಎ.ಸಿ.ಚಂದ್ರಪ್ಪ ಅವರನ್ನು ಕಸಾಪ ಪದಾಧಿಕಾರಿಗಳು ಸಮ್ಮೇಳನಕ್ಕೆ ಆಹ್ವಾನಿಸಿದರು. ಸೂರಿ ಶ್ರೀ ನಿವಾಸ್, ಹ.ಪುಟ್ಟಸ್ವಾಮಿ, ಚಂದ್ರಪ್ಪ, ಜಿ.ಉಮಾಪತಿ, ಚಿಕ್ಕನಲ್ಲೂರು ಪರಮೇಶ್ ಮತ್ತಿತರಿದ್ದರು.
Published on

ಕಡೂರು: ಅಜ್ಜಂಪುರ ತಾಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎ.ಸಿ.ಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಅಜ್ಜಂಪುರ ಪಟ್ಟಣದಲ್ಲಿ ಸೋಮವಾರ ಕಸಾಪ ಸಮಿತಿ ಪದಾಧಿಕಾರಿಗಳು ಸಮ್ಮೇಳನದ ಸರ್ವಾಧ್ಯಕ್ಷ ಎ.ಸಿ.ಚಂದ್ರಪ್ಪ ದಂಪತಿಯನ್ನು ಸಮ್ಮೇಳನಕ್ಕೆ ಆಹ್ವಾನಿಸಿದ ನಂತರ ಮಾತನಾಡಿದ ಅವರು, ಕಸಬಾ ಹೋಬಳಿಯ ಕಾಟಿಗನೆರೆ ಗ್ರಾಮದಲ್ಲಿ ಮೇ.19ರಂದು ಸಮ್ಮೇಳನ ನಡೆಸಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ ಮಾತನಾಡಿ, ಕಲೆ, ನಾಡು, ನುಡಿ, ಸಾಹಿತ್ಯ, ಸಂಗೀತ ಹಾಗೂ ಪರಂಪರೆ ಉಳಿಸಿ ಬೆಳೆಸಲು ಎ.ಸಿ.ಚಂದ್ರಪ್ಪ ಕೈ ಜೋಡಿಸಿದ್ದಾರೆ. ಈ ಹಿನ್ನಲೆಯಲ್ಲಿ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಮಾಡಲಾಗಿದೆ. ಸಮ್ಮೇಳನವನ್ನು ಅರ್ಥಪೂರ್ಣವಾಗಲಿಸಲು ವಿವಿಧ ಘಟಕದ ಪದಾಧಿಕಾರಿಗಳು ಸಿದ್ದತೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಹಿರಿಯ ಸದಸ್ಯ ಹ.ಪುಟ್ಟಸ್ವಾಮಿ ಮಾತನಾಡಿ, ಎ.ಸಿ.ಚಂದ್ರಪ್ಪ ಅವರು ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು 40 ವರ್ಷಗಳಿಂದ ಕಲೆ, ಸಾಹಿತ್ಯ ಸಂಗೀತ ನಾಟಕ ಕಲೆಗೆ ಪ್ರೋತ್ಸಾಹ ನೀಡುತ್ತಾ ಈ ಭಾಗದಲ್ಲಿ ಜನಮನ್ನಣೆಗಳಿಸಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನದ ಸ್ವಾಗತ ಸಮಿತಿ ಮಹಾ ಪೋಷಕ ಜಿ.ಉಮಾಪತಿ ಆರಾಧ್ಯ, ಸಿ. ಶಿವಪ್ರಸಾದ್, ಕಸಬಾ ಹೋಬಳಿ ಕಸಾಪ ಅಧ್ಯಕ್ಷ ಜಿ.ಎಲ್.ಮಂಜುನಾಥ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಎಸ್.ಗಾಯತ್ರಮ್ಮ, ಎ.ಬಿ.ನವೀನ್, ಮೋಹನ್ ಜಾದವ್, ಕಾಂತೇಶ್ ಜಿ.ಆರ್.ಮಂಜಪ್ಪ, ಟಿ.ಸಿ.ಶಿವಕುಮಾರ್, ಚಿಕ್ಕನಲ್ಲೂರು ಪರಮೇಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net