ದಾಸೋಹ ಮಠ ಉದ್ಘಾಟನೆಗೆ ಆಹ್ವಾನ

ಗುರು ಮಲ್ಲೇಶ್ವರ ದಾಸೋಹ ಮಠದ ಉದ್ಘಾಟನೆ ಸಮಾರಂಭಕ್ಕೆ ಶಾಸಕ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರನ್ನು ಬಿಳಿಗೆರೆಹುಂಡಿ ಮಠದ ಗುರುಸ್ವಾಮಿ ಸ್ವಾಮೀಜಿ ಆಹ್ವಾನಿಸಿದರು. ಡಿ.ಎಲ್.ಮಹದೇವಪ್ಪ, ಎಸ್. ಕೆ. ಕಿರಣ್, ಕಿರಗಸೂರ್ ಮಹದೇವಸ್ವಾಮಿ ಇತರರು ಇದ್ದರು.

Published on

ತಿ.ನರಸೀಪುರ: ತಾಲೂಕಿನ ಬಿಳಿಗೆರೆಹುಂಡಿ ಗ್ರಾಮದಲ್ಲಿ ಫೆ.20 ರಂದು ನೂತನ ದಾಸೋಹ ಮಠದ ಉದ್ಘಾಟನೆ ಸಮಾರಂಭ ನಡೆಯರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಮಠದ ಭಕ್ತವೃಂದದಿಂದ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.

ಬಿಳಿಗೆರೆಹುಂಡಿ ಗುರುಮಲ್ಲೇಶ್ವರ ದಾಸೋಹ ಮಠದ ಪೀಠಾಧ್ಯಕ್ಷರಾದ ಗುರುಸ್ವಾಮಿ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಸೋಮವಾರ ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಶ್ರೀಗಳಿಂದ ಸನ್ಮಾನ, ಆಹ್ವಾನ ಸ್ವೀಕರಿಸಿ ಮಾತನಾಡಿದ ವಿಜಯೇಂದ್ರ, ಸಮಾಜದಲ್ಲಿ ದಾಸೋಹ ಮಠಗಳ ಸಾಮಾಜಿಕ ಸೇವೆ ಅನನ್ಯವಾದದ್ದು. ಅದರಲ್ಲೂ ಮೈಸೂರು ಭಾಗದ ಮಠಗಳಿಗೆ ತನ್ನದೇ ಆದ ವೈಶಿಷ್ಟ್ಯತೆಗಳಿದ್ದು, ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಭರವಸೆ ನೀಡಿದರು.

ಹಿರಿಯ ಮುಖಂಡ ಡಿ.ಎಲ್.ಮಹದೇವಪ್ಪ , ಕಿರಗಸೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕಿರಗಸೂರು ಮಹದೇವಸ್ವಾಮಿ, ಶಿವರಾಜು, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಉಪಾಧ್ಯಕ್ಷ ಎಸ್.ಕೆ.ಕಿರಣ್, ಜೆಎಸ್‌ಎಸ್ ನಟರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net