

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದಿಂದ ಜರುಗಲಿರುವ ಜಲರಥೋತ್ಸವಕ್ಕೆ ಚಾಲನೆ ನೀಡಲು ಧಾರವಾಡ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಹಾಗೂ ಶ್ರೀ ಸಿದ್ಧಾರೂಢ ಮಠದ ಮುಖ್ಯ ಆಡಳಿತಾಧಿಕಾರಿ ಬಿ.ಎಸ್. ಭಾರತಿ ಅವರನ್ನು ಶ್ರೀಮಠದ ಭಾನುವಾರ ಆಹ್ವಾನಿಸಲಾಯಿತು.
ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ಮಂಜುನಾಥ ಮುನವಳ್ಳಿ, ಉದಯಕುಮಾರ ನಾಯ್ಕ, ವಕೀಲೆ ಪ್ರಿಯಾಂಕ ತೆರಗುಂಟಿ ಇದ್ದರು.