ತಾಲೂಕು ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಹ್ವಾನ

INVITATION to President
Published on

ಮುಂಡಗೋಡ: ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಎಸ್. ಫಕ್ಕೀರಪ್ಪ ಅವರಿಗೆ ಸಾಹಿತ್ಯ ಪರಿಷತ್ ವತಿಯಿಂದ ಅಧಿಕೃತವಾಗಿ ಅಹ್ವಾನ ಪತ್ರಿಕೆಯನ್ನು ಮಂಗಳವಾರ ನೀಡಲಾಯಿತು.

ಅ. 16ರಂದು ಪಟ್ಟಣದ ವಿವೇಕಾನಂದ ಬಯಲು ರಂಗ ಮಂಟಪದಲ್ಲಿ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಾಹಿತ್ಯ ಪರಿಷತ್​ನ ವತಿಯಿಂದ ಸಕಲ ಸಿದ್ಧತೆ ನಡೆಸಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಎಸ್. ಫಕ್ಕೀರಪ್ಪ ಅವರ ಮನೆಗೆ ತೆರಳಿ ಅಹ್ವಾನ ಪತ್ರಿಕೆ ನೀಡಲಾಯಿತು.

ಈ ವೇಳೆ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ವಸಂತ ಕೊಣಸಾಲಿ, ಸಂಗಪ್ಪ ಕೊಳೂರ, ಎಸ್.ಬಿ.ಹೂಗಾರ, ಎಸ್.ಕೆ.ಬೋರ್ಕರ, ರಾಜಶೇಖರ ನಾಯ್ಕ, ಶಿವಾನಂದ ವಾಲಿಶೇಟ್ಟರ, ನಾಗರಾಜ ಅರ್ಕಸಾಲಿ, ಮಲ್ಲಮ್ಮ ನೀರಲಗಿ, ಆನಂದ ಹೊಸೂರ,ಶೀಲಾ ರಾಠೋಡ, ವಿನಾಯಕ ಶೇಟ್, ಸುಭಾಸ ವಡ್ಡರ,ಸೋಮಣ್ಣ ಮುಡೇಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net