ದಸರಾ ವಿಶೇಷ ದೀಪಾಲಂಕಾರಕ್ಕೆ ಸಲಹೆಗಳ ಆಹ್ವಾನ

mysore dasara
Published on

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಚಾ.ವಿ.ಸ.ನಿ.ನಿ ವತಿಯಿಂದ ಮೈಸೂರು ನಗರ ವ್ಯಾಪ್ತಿಯಲ್ಲಿ ಪ್ರಮುಖ ವೃತಗಳು, ರಸ್ತೆಗಳು ಹಾಗೂ ಪ್ರತಿಕೃತಿಗಳಿಗೆ ದೀಪಾಲಂಕಾರ ಮಾಡಲಾಗುತ್ತಿದೆ.

ದೀಪಾಲಂಕಾರವನ್ನು ವಿನೂತನವಾಗಿ ನಿರ್ವಹಿಸುವ ಉದ್ದೇಶದಿಂದ ಸಾರ್ವಜನಿಕರಿಂದ ವಿದ್ಯುತ್ ದೀಪಾಲಂಕಾರಕ್ಕೆ ಸಂಬoಧಿಸಿದoತೆ ವಿನೂತನ ಮಾದರಿಗಳು/ ಪ್ರತಿಕೃತಿಗಳು ಹಾಗೂ ಸಲಹೆ ಸೂಚನೆಗಳೇನಾದರೂ ಇದ್ದಲ್ಲಿ ಆಗಸ್ಟ್ 28 ರೊಳಗೆ ಛಾಯಾಚಿತ್ರ ಮತ್ತು ವೀಡಿಯೋಗಳನ್ನು ಕಛೇರಿ ಇ-ಮೇಲ್ ವಿಳಾಸ seeworksmy@gmail.comseemys@cescmysore.org ಗೆ ಸಲ್ಲಿಸಬಹುದು.


ಹೆಚ್ಚಿನ ಮಾಹಿತಿಗಾಗಿ ಚಾ.ವಿ.ಸ.ನಿ.ನಿ ಕಾರ್ಯ ಮತ್ತು ಪಾಲನಾ ವೃತ್ತದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ ಶ್ರೀನಾಥ್ ದೂ.ಸಂ:9449598548 ಅನ್ನು ಸಂಪರ್ಕಿಸಬಹುದು ಎಂದು ಚಾ.ವಿ.ಸ.ನಿ.ನಿ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net