

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡದ ಸಾಹಿತಿ, ವಿಮರ್ಶಕ ದಿ. ಡಾ.ಗಿರಡ್ಡಿ ಗೋವಿಂದರಾಜ ಸ್ಮರಣಾರ್ಥ ಪ್ರತಿ ವರ್ಷ ಕನ್ನಡದ ಒಂದು ಸ್ವತಂತ್ರ ವಿಮರ್ಶಾ ಕೃತಿಗೆ ಧಾರವಾಡದ ಡಾ.ಗಿರಡ್ಡಿ ಗೋವಿಂದರಾಜ ೌಂಡೇಶನ್ ಪ್ರಶಸ್ತಿ ನೀಡುತ್ತಿದ್ದು, ಪ್ರಸಕ್ತ ಸಾಲಿನ ವಿಮರ್ಶಾ ಪ್ರಶಸ್ತಿಗೆ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿ 25 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಪ್ರಶಸ್ತಿಯನ್ನು 2023ರ ಜ. 1ರಿಂದ 2023ರ ಡಿಸೆಂಬರ್ 31ರ ಅವಧಿಯಲ್ಲಿ ಪ್ರಥಮ ಸಲ ಮುದ್ರಣಗೊಂಡ ಕನ್ನಡದ ವಿಮರ್ಶಾ ಕೃತಿಗೆ ನೀಡಲಾಗುವುದು. ಒಬ್ಬ ವಿಮರ್ಶಕರ ಒಂದು ಕೃತಿಯನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಗೆ ಕಳುಹಿಸುವ ಕೃತಿಯ 4 ಪ್ರತಿಗಳನ್ನು ಮೇ 30ರೊಳಗೆ ಅಧ್ಯರು, ಡಾ.ಗಿರಡ್ಡಿ ಗೋವಿಂದರಾಜ ೌಂಡೇಶನ್, ಮನೋಹರ ಗ್ರಂಥಮಾಲಾ, ಸುಭಾಷ ರಸ್ತೆ, ಧಾರವಾಡ&580001 ವಿಳಾಸಕ್ಕೆ ಕಳುಹಿಸಬೇಕು. ಸಂಗ್ರಹ, ಸಂಕಲನ, ಅನುವಾದ, ಪಿಎಚ್.ಡಿ ಸಂಶೋಧನಾ ಪ್ರಬಂಧ ಕೃತಿಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.