

ಜಿಲ್ಲಾ ಕೇಂದ್ರ ಗ್ರಂಥಾಲಯ ಮೈಸೂರು ಕಚೇರಿ ಹಾಗೂ ಅಧೀನ ತಾಲೂಕು ಶಾಖಾ ಗ್ರಂಥಾಲಯಗಳಲ್ಲಿ 2022-23 ನೇ ಸಾಲಿಗೆ ಸಂಬಂಧಿಸಿದಂತೆ ಲಭ್ಯವಿರುವ ಹಳೆಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ನಿಯಾಮಾನುಸಾರ ವಿಲೇವಾರಿ ಮಾಡಲು ದರಪಟ್ಟಿ ಆಹ್ವಾನಿಸಲಾಗಿದೆ.
ಆಗಸ್ಟ್ 28 ರಿಂದ ಸೆಪ್ಟೆಂಬರ್ 16 ರವರೆಗೆ ಅರ್ಜಿಗಳನ್ನು ಪಡೆಯಲು ಅವಕಾಶವಿದೆ. ನಗರದ ಕೇಂದ್ರ ಗ್ರಂಥಾಲಯಲ್ಲಿ 50 ರೂ. ಪಾವತಿಸಿ ಅರ್ಜಿ ಪಡೆಯಬಹುದಾಗಿದೆ. ಅರ್ಜಿಯನ್ನು ಸೆಪ್ಟೆಂಬರ್ 19 ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ದೂ.0821-2425875, 2425975 ಸಂಪರ್ಕಿಸಲು ಕೋರಲಾಗಿದೆ.