ಬಸವನಬಾಗೇವಾಡಿ: ಶತಮಾನದ ಸಂತ, ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳವರ ‘ಅಂತರಂಗದ ಅರಿವು’ ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ವಿರಕ್ತಮಠದಲ್ಲಿ ಮುಂಬರುವ ಜ.2 ರಂದು ಶಿವಲಿಂಗೇಶ್ವರ ವಿರಕ್ತಮಠದ ಶರಣವ್ರತ ಬಳಗ, ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಬಸವನಬಾಗೇವಾಡಿ ಸಹಯೋಗದಲ್ಲಿ ಕವನಗಳ ಆಹ್ವಾನ ಮಾಡಲಾಗಿದೆ. ಭಾಗವಹಿಸುವ ಕವಿಗಳು ‘ಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳ ದೃಷ್ಟಿಯಲ್ಲಿ ಶರಣರು, ದೇವರು, ಕಾಯಕ, ಸಾವಯವ ಕೃಷಿ ಹಾಗೂ ಸಂಬಂಧಗಳು’ ಕುರಿತಾಗಿ ಕವನ ರಚಿಸಿರಬೇಕು. ಡಿ.31 ರೊಳಗಾಗಿ ಕವನ ಕಳಿಸಿ ನೋಂದಾಯಿಸಬೇಕು. ಮಾಹಿತಿಗಾಗಿ ಮೊ.9740474356, 7829418656 ಸಂಪರ್ಕಿಸಿ ಎಂದು ಪ್ರಕಟಣೆ ತಿಳಿಸಿದೆ.