ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಕನ್ನಡ ಮಾಧ್ಯಮದ ಆಯ್ದ 50 ಸರ್ಕಾರಿ ಅಥವಾ ಅನುದಾನಿತ ಪ್ರೌಢ ಶಾಲಾ ಗ್ರಂಥಾಲಯಗಳಿಗೆ ಒಟ್ಟು 5000 ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಗ್ರಂಥಾಲಯಗಳಿಗೆ ನೀಡಲಾಗುವ ಪುಸ್ತಕಗಳು ಈ ವಯಸ್ಸಿನ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದ್ದು ಸಾಮಾನ್ಯ ಜ್ಞಾನ,ಆರೋಗ್ಯ, ಸ್ವದೇಶಿ ಚಿಂತನೆ, ಸಾಧಕರ ಜೀವನ ಚರಿತ್ರೆ, ನೀತಿ ಕಥೆಗಳಿಗೆ ಸಂಬಂಧಿಸಿದ್ದಾಗಿವೆ. ಶಾಲಾ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ತಮ್ಮ ಶಾಲೆಯ ಗ್ರಂಥಾಲಯದಿಂದ ಈ ಪುಸ್ತಕಗಳನ್ನು ಪಡೆದು ಓದುವಂತಾಗಿ ತನ್ಮೂಲಕ ಅವರಲ್ಲಿ ಓದುವ ಹವ್ಯಾಸ ಉಳಿಯಲಿ, ಬೆಳೆಯಲಿ ಎಂಬ ಸದುದ್ದೇಶದಿಂದ ಶಾಲೆಗಳ ಗ್ರಂಥಾಲಯಗಳಿಗೆ ಶ್ರೀಶಾ ಸೊಸೈಟಿಯು ಉಚಿತವಾಗಿ ನೀಡಲಾಗುತ್ತಿದೆ. ಆಸಕ್ತ ಶಾಲೆಗಳ ಮುಖ್ಯಸ್ಥರು ಶ್ರೀಶಾ ಸೊಸೈಟಿಯ ಯಾವುದೇ ಶಾಖೆಯನ್ನು ಬೆಳಗ್ಗೆ ಗಂಟೆ 10 ರಿಂದ ಸಂಜೆ 5 ರೊಳಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ರಘು ಬಿಲ್ಡಿಂಗ್, ಉರ್ವಸ್ಟೋರ್, ಮಂಗಳೂರು. ದೂರವಾಣಿ: 9845032598/9448254526/0824 2453598 ಸಂಪರ್ಲಿಸುವಂತೆ ಕೋರಲಾಗಿದೆ.