

ಮೈಸೂರು: ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ನಿಶಾದ್ ಬಾಗ್ (ಕುಪ್ಪಣ್ಣ ಪಾರ್ಕ್) ಅವರಣದಲ್ಲಿ ಅಕ್ಟೋಬರ್ 15 ರಿಂದ 24 ರವರೆಗೆ 2023-24 ನೇ ಸಾಲಿನ ದಸರಾ ಫಲಪುಷ್ಪ ಪ್ರದರ್ಶನವನ್ನು ನಡೆಸಲು ತಿರ್ಮಾನಿಸಲಾಗಿದೆ.
ಆರ್ಕಿಡ್ಸ್, ಅಂತೋರಿಯo, ಬೋನ್ಸಾಯಿ ಗಿಡಗಳು ಮತ್ತು ವಿವಿಧ ಎಕ್ಸೋಟಿಕ್ ಪ್ಲಾಂಟ್ಸ್ ಸ್ಪೀಶಿಸ್ ಗಳನ್ನು ನಿಶಾದ್ ಬಾಗ್ ಆವರಣದಲ್ಲಿ ಪ್ರದರ್ಶಿಸಲು ಅವಕಾಶವಿದೆ.
ಆಸಕ್ತಿಯುಳ್ಳವರು ಅಕ್ಟೋಬರ್ 05 ರೊಳಗೆ ಮೈಸೂರಿನ ಕರ್ಜನ್ ಪಾರ್ಕ್ನಲ್ಲಿರುವ ಜಿಲ್ಲಾ ತೋಟಗಾರಿಕೆ ಸಂಘದ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಕೊಳ್ಳಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಪದನಿಮಿತ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.