

ಹಂಸಭಾವಿ: ಡಿ. 16ರಂದು ನಡೆಯುವ ಶ್ರೀ ಹೊಳಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಹಾಗೂ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಮುದಾಯ ಭವನ ಹಾಗೂ ದಾಸೋಹ ಭವನದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸುವಂತೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಗ್ರಾಮಸ್ಥರು ಸಿರಿಗೆರೆಗೆ ತೆರಳಿ ಆಹ್ವಾನಿಸಿದರು.
ಗ್ರಾಮಸ್ಥರ ಆಹ್ವಾನ ಸ್ವೀಕರಿಸಿದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ಸೂಚಿಸಿದರು.
ಹಿರೇಕೆರೂರ ತಾಲೂಕು ಸದ್ಧರ್ಮ ಸಮಾಜದ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ಕಾರ್ಯದರ್ಶಿ ರಾಜಶೇಖರ ಪಾಟೀಲ, ಗ್ರಾಪಂ ಅಧ್ಯಕ್ಷ ರಾಜಶೇಕರ ಹುಚಗೊಂಡ್ರ, ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಮಲ್ಲಜ್ಜಿ, ಕಾರ್ಯದರ್ಶಿ ಮೋಹನಗೌಡ ಪಾಟೀಲ, ಸದಸ್ಯರಾದ ಶಿವಯೋಗಿ ಹುಚಗೊಂಡ್ರ, ಜಯಪ್ಪ ಬಂಡೇರ, ಶಿವಯೋಗಿ ಹುಚಗೊಂಡ್ರ, ಬಸವರಾಜ ಕೊಳ್ಳಿ, ಸೋಮಶೇಕರ ಹೊಸಮನಿ ಇತರರು ಉಪಸ್ಥಿತರಿದ್ದರು.