ದಸರಾ ಬೊಂಬೆ ಪ್ರದರ್ಶನ ಸ್ಪರ್ಧೆಗೆ ಆಹ್ವಾನ

Dasara Puppet Show
Published on

ಮೈಸೂರು: ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ವತಿಯಿಂದ ದಸರಾ ಹಾಗೂ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ದಸರಾ ಬೊಂಬೆ ಪ್ರದರ್ಶನ ಮತ್ತು ನೃತ್ಯ ಸ್ಪರ್ಧೆ ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಉಮ ಅನಿಲ್ ಹೇಳಿದರು.

ದಸರಾ ಪ್ರಯುಕ್ತ ರಾಮ್‌ಸನ್ಸ್ ಬೊಂಬೆ ಮನೆ ಸಹಯೋಗದಲ್ಲಿ ಬೊಂಬೆಗಳ ಪ್ರದರ್ಶನ ಸ್ಪರ್ಧೆ ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕೂರಿಸಿರುವ ದಸರಾ ಬೊಂಬೆಗಳ ಫೋಟೋ ಅಥವಾ ವಿಡಿಯೋವನ್ನು ಕಳುಹಿಸಿಕೊಡಬೇಕು. ಸ್ವಾತಂತ್ರೃದ ಅಮೃತ ಮಹೋತ್ಸವದ ಥೀಮ್ ಹೊಂದಿರುವವರಿಗೆ 10 ಅಂಕಗಳ ಬೋನಸ್ ನೀಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ತಾಯಿ-ಮಗಳು, ತಂದೆ-ಮಗಳು ಅಥವಾ ತಂದೆ-ತಾಯಿ-ಮಗಳ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ನೃತ್ಯದ ವಿಡಿಯೋ ಹಾಗೂ ಬೊಂಬೆ ಪ್ರದರ್ಶನದ ವಿಡಿಯೋ ಅಥವಾ ಫೋಟೋಗಳನ್ನು aniluma8@gmail.com ಇಲ್ಲಿಗೆ ಕಳುಹಿಸಬೇಕು. ಮಾಹಿತಿಗೆ ಮೊ:88619 38451 ಸಂಪರ್ಕಿಸಬಹುದು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದರು.ಸ್ಪರ್ಧೆಯ ಪ್ರವೇಶ ಶುಲ್ಕ 200 ರೂ. ನಿಗದಿ ಪಡಿಸಲಾಗಿದೆ. ಈ ಸ್ಪರ್ಧೆಯಿಂದ ಸಂಗ್ರಹವಾಗುವ ಹಣವನ್ನು ಬಡ ವರ್ಗದಲ್ಲಿ ಅವಶ್ಯಕತೆ ಇರುವವರಿಗೆ ವೀಲ್‌ಚೇರ್‌ಗಳನ್ನು ನೀಡಲು ಬಳಕೆ ಮಾಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಪ್ರೇಮಾ ರವಿ, ಪ್ರತಿಭಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net