

ರಾಯಚೂರು ಹೊಸಮನಿ ಪ್ರಕಾಶನ ವತಿಯಿಂದ ಜಿಲ್ಲಾ ಮಟ್ಟದ ಹನಿಗವನ ಸಂಕಲನ ಹೊರ ತರುವ ಉದ್ದೇಶದಿಂದ ಸ್ವರಚಿತ ಹನಿಗವನಕ್ಕೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಜೂ.6 ರೊಳಗೆ ಅಂಚೆ ಮೂಲಕ ಕಳುಹಿಸಿಕೊಡಬೇಕು ಎಂದು ಪ್ರಕಾಶನದ ಪ್ರಧಾನ ಕಾರ್ಯದರ್ಶಿ ಶೀಫಾ ಹೊಸಮನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹನಿಗವನ ರಚನೆಗೆ ಯಾವುದೇ ಛಂದಸ್ಸು ಇಲ್ಲ, ಸುಸಂಬದ್ಧವಾಗಿ ಕಾವ್ಯಾತ್ಮಕವಾಗಿ ರಚನೆ ಮಾಡಬೇಕು, 6 ಸಾಲಿಗಿಂತ ಕಡಿಮೆ ಇರಬಾರದು 11 ಸಾಲಿಗಿಂತ ಹೆಚ್ಚಿರ ಬಾರದು. ರಚನೆಯಲ್ಲಿ ವೈಯಕ್ತಿಕ ನಿಂದನೆಗಳಿರಬಾರದು ಎಂದು ತಿಳಿಸಿದರು.
ಹನಿಗವನ ರಚನೆಗೆ ಜಿಲ್ಲೆಯವರಿಗೆ ಮಾತ್ರ ಅವಕಾಶ, ಬೇರೆ ಜಿಲ್ಲೆಯಿಂದ ಜಿಲ್ಲೆಯಲ್ಲಿ ನೆಲೆಸಿರುವವವರು ಭಾಗವಹಿಸಬಹುದಾಗಿದೆ, ಹನಿಗವನ ರಚನೆ ಮಾಡಿ ವಾಟ್ಸಾಪ್ ಮೊಬೈಲ್ ಸಂಖ್ಯೆಯೊಂದಿಗೆ ವಿಳಾಸ ಕಳುಹಿಸಿಕೊಡಬೇಕು. ಅಯ್ಕೆಯಾಗದ ಹನಿಗವನ ಹಿಂತಿರುಗಿಸಲಾಗುವುದಿಲ್ಲ, ಆಯ್ಕೆಯಾದ ನಂತರ ಮಾಹಿತಿ ನೀಡಲಾಗುತ್ತದೆ, ಅರ್ಜಿಯನ್ನು ಜೂ.10ರೊಳಗೆ ಹೊಸಮನಿ ಪ್ರಕಾಶನದ ಆಧ್ಯಕ್ಷರು ಕನ್ನಡ ಡಿಂಡಿಮ ನಿಲಯ ಮನೆ ಸಂ.14-02-215-9 ಅಸ್ಕಿಹಾಳ 584104ಗೆ ಕಳಿಸಿಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಕಾಶನದ ಅಧ್ಯಕ್ಷ ಬಷೀರ್ ಹೊಸಮನಿ, ಉಪಾಧ್ಯಕ್ಷ ಪರ್ವೀನ್ ಹೊಸಮನಿ, ಖುಷಿ ಹೊಸಮನಿ ಇದ್ದರು.