ರ‍್ಯಾಪಿಡ್ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ

Arial Survey
Published on

 ಮೈಸೂರು ಮಹಾನಗರ ವ್ಯಾಪ್ತಿಯ ಡೇ-ಎನ್‌ಯುಎಲ್‌ಎಂ ಅಭಿಯಾನದ ನಗರ ವಸತಿ ರಹಿತರಿಗೆ ಆಶ್ರಯ ಉಪ ಘಟಕದಡಿ “ಕ್ಷಿಪ್ರ ಸಮೀಕ್ಷೆ” (Rapid Survey)ಯನ್ನು ಕೈಗೊಳ್ಳಲಾಗುತ್ತಿದೆ.

ಸೆ.12 ಮತ್ತು 13 ರಂದು ರಾತ್ರಿ 11 ಗಂಟೆಯಿoದ ನಗರದಾಂದ್ಯತ ರಾತ್ರಿ ವೇಳೆ ನಿರ್ಗತಿಕರುಗಳು ರಸ್ತೆ ಬದಿ/ಅಂಗಡಿಗಳ ಜಗುಲಿ/ರೈಲ್ವೆ ನಿಲ್ದಾಣ/ಬಸ್ ನಿಲ್ದಾಣ/ಪಾರ್ಕ್/ಸಾರ್ವಜನಿಕ ಸ್ಥಳಗಳಲ್ಲಿ ಮಲಗುವ ಮಾನಸಿಕ ಅಸ್ವಸ್ಥರು, ವೃದ್ಧರು, ಮಕ್ಕಳು, ಅಂಗವಿಕಲರು ಮತ್ತು ಇನ್ನಿತರೆ ವಸತಿ ರಹಿತರು/ಅನಾಥರುಗಳನ್ನು ಗುರುತಿಸಿ ಆಪ್ತ ಸಮಲೋಚನೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲು ರ‍್ಯಾಪಿಡ್ ಸಮೀಕ್ಷೆಯನ್ನು ಕೈಗೊಳ್ಳುತ್ತಿದೆ.

ಸದರಿ ರ‍್ಯಾಪಿಡ್ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಲು ಇಚ್ಚಿಸುವ ಆಸಕ್ತ ಅರ್ಹ ಸರ್ಕಾರೇತರ ಸ್ವಯಂ ಸಂಸ್ಥೆಗಳು/ ವಿಶ್ವವಿದ್ಯಾನಿಲಯ/ ಕಾಲೇಜುಗಳು/ ಸಮುದಾಯ ಸಂಸ್ಥೆಗಳು/ ಎಸ್.ಹಚ್.ಜಿಗಳು/ ರೋಟರಿ ಕ್ಲಬ್/ ಲಯನ್ಸ್ ಕ್ಲಬ್/ ನೆಹರು ಯುವ ಕೇಂದ್ರ ಇತ್ಯಾದಿ ಆಸಕ್ತಿಯಳ್ಳವರು ಸೆ.06 ರಂದು ಕಛೇರಿಯ ಸಮಯದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಡೇ- ವಿಭಾಗಕ್ಕೆ ಸೇವಾ ಬಂದು ಮಾಹಿತಿ ಪಡೆದು ನೊಂದಾಯಿಸಿಕೊಳ್ಳುವoತೆ ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net