

ಮೈಸೂರು: ಪುರಸಭೆ, ಕೃಷ್ಣರಾಜನಗರ ವತಿಯಿಂದ 2024-25ನೇ ಸಾಲಿನ ಡೇ-ನಲ್ಮ್ ಯೋಜನೆಯಡಿ ಸ್ವಯಂ ಉದ್ಯೋಗ, ಗುಂಪು ಉದ್ಯೋಗ, ಗುಂಪುಗಳ ಕ್ರೇಡಿಟ್ ಲಿಂಕೇಜ್, ಕೌಶಲ್ಯ ತರಬೇತಿ, ಪ್ರಧಾನ ಮಂತ್ರಿ ಕಿರು ಆಹಾರ ಸುರಕ್ಷಿತ ತಯಾರಿಕೆ, ಸ್ವ-ಸಹಾಯ ಗಂಪುಗಳಿಗೆ ಪ್ರಾದೇಶಿಕೆ ಮಟ್ಟದ ಒಕ್ಕೂಟ, ಸಾಮಾಜಿಕ ಕ್ರೋಢೀಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿ ಗುಂಪುಗಳ ರಚನೆ, ಬೀದಿ ಬದಿ ವ್ಯಾಪಾರಸ್ಥರ ಸೌಲಭ್ಯಕ್ಕಾಗಿ ಗುರಿ ನಿಗಧಿಪಡಿಸಿದ್ದು, ಅದರನುಗುಣವಾಗಿ ಅರ್ಜಿ ಅಹ್ವಾನಿಸಲಾಗಿದೆ.
ಕೃಷ್ಣರಾಜನಗರ ಪುರಸಭೆಯ ವ್ಯಾಪ್ತಿಯಲ್ಲಿರುವ ಸಂಬoಧಪಟ್ಟ ಫಲಾನುಭವಿಗಳು ಅರ್ಜಿಗಳನ್ನು ಜುಲೈ 31 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪುರಸಭಾ ಕಛೇರಿಯ ವ್ಯವಸ್ಥಾಪಕರು ಹಾಗೂ ಡೇ-ನಲ್ಮ್ ಸಿಬ್ಬಂದಿಯನ್ನು ಅಥವಾ ದೂ.ಸ: 08223-262242 ಅನ್ನು ಸಂಪರ್ಕಿಸಬಹುದು ಎಂದು ಕೃಷ್ಣರಾಜನಗರ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.