

ತಿ.ನರಸೀಪುರ: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಲಾಗಿರುವ 79ನೇ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ತಾಲೂಕಿನ ಸಾಧಕರನ್ನ ಸನ್ಮಾನಿಸಲು ತೀರ್ಮಾನಿಸಲಾಗಿದ್ದು, ಸನ್ಮಾನಕ್ಕೆ ಅರ್ಹರಾಗಿರುವ ಸಾಧಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ ಸಾಧಕರು ಸನ್ಮಾನಕ್ಕೆ ತಮ್ಮ ಸಾಧನೆಯ ದಾಖಲಾತಿಗಳನ್ನು ದೃಢೀಕರಿಸಿ ತಾಪಂ ಇಒಗೆ ಆ.11ರ ಸಂಜೆ 5 ಗಂಟೆಗೊಳಗಾಗಿ ಅಜಿರ್ಯನ್ನು ತಲುಪಿಸಬೇಕು ಎಂದು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.