

ಉಡುಪಿ: ನಗರಸಭಾ ಹಾಗೂ ತಾಪಂ ವ್ಯಾಪ್ತಿಯ ಶತಾಯುಷಿ ಮತದಾರರ ಮನೆ ಬಾಗಿಲಿಗೆ ತೆರಳಿದ ಅಧಿಕಾರಿಗಳು ವಿಧಾನಸಭಾ ಚುನಾವಣೆ ಮತದಾನದಲ್ಲಿ ಭಾಗವಹಿಸಲು ಆಹ್ವಾನ ಪತ್ರಿಕೆ ನೀಡಿದರು.
ಶತಾಯುಷಿ ಮತದಾರರಾದ ದೊಡ್ಡಣ್ಣಗುಡ್ಡೆ ಲಿಯೋನೋ ರೊಡ್ರಿಗಸ್, ನಿಟ್ಟೂರು-ಕರಂಬಳ್ಳಿ ಲಕ್ಷ್ಮೀ, ಕೊಡವೂರು ರಾಧಾ ಹೆಗ್ಡೆ, ಒಳಕಾಡು ರಾಮದಾಸ್ ಕಾಮತ್, ಕುತ್ಪಾಡಿ ಮೇರಿ ದಾಂತಿ ಈ ಐದು ಶತಾಯುಷಿ ಮತದಾರರನ್ನು ಆಹ್ವಾನಿಸಲಾಗಿದೆ.
ತಾಲೂಕು ಪಂಚಾಯತಿನ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಡುಪಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷೆ ವಿಜಯಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವೀಣಾ ವಿವೇಕಾನಂದ, ತಾಪಂ ವ್ಯವಸ್ಥಾಪಕ ಸುರೇಶ್, ಸಿಬ್ಬಂದಿ ಚಂದ್ರ ನಾಯ್ಕ್ ಮೊದಲಾದವರಿದ್ದರು.