

ಹೆಬ್ರಿ: ಮುದ್ರಾಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಆರನೇ ವರ್ಷದ ಮುದ್ರಾಡಿ ಶ್ರೀ ಶಾರದೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಬಿಡುಗಡೆಗೊಳಿಸಿದರು.
ಬಳಿಕ ಮಾಹಿತಿ ನೀಡಿದ ಅವರು, ಮುದ್ರಾಡಿ ಗುರುರಕ್ಷಾ ಸೌಹಾರ್ದ ಸಹಕಾರಿ ಸೊಸೈಟಿ ಆವರಣದಲ್ಲಿ ಸೆ.29ರಿಂದ ಶಾರದೋತ್ಸವ ಕಾರ್ಯಕ್ರಮ ನಡೆಯಲಿದ್ದು, ಶಾರದ ಮಾತೆಯ ಪ್ರತಿಷ್ಠಾಪನೆ, ಅಕ್ಷರ ಅಭ್ಯಾಸ, ಮಹಾಪೂಜೆ, ಸನ್ಮಾನ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ, ವಿಸರ್ಜನಾ ಪೂಜೆ, ಶೋಭಾಯಾತ್ರೆ, ಜಲಸ್ತಂಭನ ನಡೆಯಲಿದೆ ಎಂದರು.
ಪ್ರಮುಖರಾದ ಚಂದ್ರಶೇಖರ ಬಾಯರಿ, ಗಣಪತಿ ಎಂ., ಶಶಿಕಲಾ ಡಿ., ಗುರುಪ್ರಸಾದ್ ಹೆಗ್ಡೆ ಕೊಳಂಬೆ, ಸನತ್ ಕುಮಾರ್ ಮುದ್ರಾಡಿ, ಸಂತೋಷ್ ಪೂಜಾರಿ ನೆಕ್ಕಾರ್ ಬೆಟ್ಟು, ಶಿವಾನಂದ ಶೆಟ್ಟಿ ಮುದ್ರಾಡಿ, ಸುಧಾಕರ್ ಶೆಟ್ಟಿ ಬಲ್ಲಾಡಿ, ಸತೀಶ್ ಸೇರಿಗಾರ ಬೆಳಗುಂಡಿ, ವಿಶು ಕುಮಾರ್ ಉಪ್ಪಳ, ಪ್ರಕಾಶ್ ಸೇರಿಗಾರ್, ಪ್ರಕಾಶ್ ಪೂಜಾರಿ, ಆದರ್ಶ್ ಎಂ.ಪೂಜಾರಿ, ಪ್ರಶಾಂತ್ ಪೈ ಮುದ್ರಾಡಿ, ಕೃಷ್ಣ ಶೆಟ್ಟಿಗಾರ್ ಮುದ್ರಾಡಿ, ಮಹೇಶ್ ಕಾನ್ಗುಂಡಿ, ಪ್ರೀತಮ್ ಶೆಟ್ಟಿ ಕೆಲಕಿಲ ಉಪಸ್ಥಿತರಿದ್ದರು. ಚಂದ್ರಶೇಖರ ಭಟ್ ಸ್ವಾಗತಿಸಿದರು. ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು.