

ಬೆಳಗಾವಿ: ಜಿಲ್ಲೆಯ ಸಹೃದಯ ಸಾಹಿತ್ಯ ಪ್ರತಿಷ್ಠಾನವು ಯುವಕವಿಗಳಿಗೆ ವೇದಿಕೆ ಒದಗಿಸಲು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಿನಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕವಿಗೋಷ್ಠಿಗೆ ಆಸಕ್ತ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ. ಕವಿಗಳು ಈಚೆಗೆ ಬರೆದಿರುವ ತಮ್ಮ ಎರಡು ಕವಿತೆಗಳನ್ನು ಸ್ವ-ವಿಳಾಸದೊಂದಿಗೆ ಅಕ್ಟೋಬರ್ 15ರೊಳಗೆ ಕಳುಹಿಸಬೇಕು. ನಿರ್ಣಾಯಕರು ನಿರ್ಣಯಿಸಿದ ಮೂರು ಅತ್ಯುತ್ತಮ ಕವಿತೆಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದು. ಆಯ್ಕೆಯಾದ 30 ಕವಿತೆಗಳನ್ನು ಕವಿಗೋಷ್ಠಿಯಲ್ಲಿ ವಾಚನ ಮಾಡಲು ಅವಕಾಶ ನೀಡಲಾಗುವುದೆಂದು ಪ್ರತಿಷ್ಠಾನದ ಕಾರ್ಯದರ್ಶಿ ರಮೇಶ್ ತಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕವಿತೆ ಕಳಿಸಬೇಕಾದ ವಿಳಾಸ; ಅಧ್ಯಕ್ಷರು, ಸಹೃದಯ ಸಾಹಿತ್ಯ ಪ್ರತಿಷ್ಠಾನ, ಅವ್ವ ಶಿವಬಸವ ನಗರ, ರಾಮಾಪೂರ ಸೈಟ್, ಸವದತ್ತಿ-591126. ಮಾಹಿತಿಗೆ ಮೊ. 9900817716ಗೆ ಸಂಪರ್ಕಿಸಬಹುದು.