ಶ್ರದ್ಧಾ ಭಕ್ತಿಯಿಂದ ಕೆಲಸ ವಾಡಿದರೆ ಯಶಸ್ಸು : ತಾ.ಪಂ. ವಾಜಿ ಅಧ್ಯಕ್ಷ ಯಶವಂತ ದೇರಾಜೆ ಅಭಿಮತ

New Project (26)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪ್ರತಿಯೊಬ್ಬರೂ ಸಂಘಟನಾತ್ಮಕವಾಗಿ ಶ್ರದ್ಧಾಭಕ್ತಿಯಿಂದ ಕೆಲಸ ವಾಡಿದರೆ ಯಾವುದೇ ಕಾರ್ಯವೂ ಯಶಸ್ವಿಯಾಗಿ ನೆರವೇರಲು ಸಾಧ್ಯ ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ವಾಜಿ ಅಧ್ಯಕ್ಷ ಯಶವಂತ ದೇರಾಜೆ ಹೇಳಿದರು.

ಗ್ರಾಮಚಾವಡಿಯಲ್ಲಿ ಕೊಣಾಜೆ, ಗ್ರಾಮಚಾವಡಿ ಬ್ರಹಶ್ರೀ ನಾರಾಯಣಗುರು ಸೇವಾ ಸಂದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಪುನಃಪ್ರತಿಷ್ಠಾಪನಾ ಮಹಾಕುಂಭಾಭಿಷೇಕ ಹಾಗೂ ಸಂಘದ 44ನೇ ವಾರ್ಷಿಕೋತ್ಸವ ಸವಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ವಾತನಾಡಿದರು.

ಡಿಸೆಂಬರ್ 22ರಿಂದ ಆರಂಭಗೊಳ್ಳುವ ಬ್ರಹ್ಮಶ್ರೀ ನಾರಾಯಣಗುರುಗಳ ಪುನಃಪ್ರತಿಷ್ಠಾಪನೆ, ಕುಂಭಾಭಿಷೇಕ, ವಾರ್ಷಿಕ ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಸುಜೀರ್ ಶ್ರೀ ಅರಸು ವೈದ್ಯನಾಥ ದೈವಸ್ಥಾನದ ಪಾತ್ರಿ ಶ್ರೀ ಮುಂಡ ಯಾನೆ ಮೋನಪ್ಪ ಪೂಜಾರಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಕಂಕನಾಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಪ್ರಧಾನ ಅರ್ಚಕ ಗಂಗಾಧರ ಶಾಂತಿ ಉದ್ಘಾಟಿಸಿದರು.

ಅರಸು ಮುಂಡಿತ್ತಾಯ ದೈವಗಳ ಪಾತ್ರಿ ಐತಪ್ಪ ಪೂಜಾರಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ದಾಮೋದರ್ ಕುಂದರ್, ವಿವಿಧ ಸಂ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂದ ಪ್ರಧಾನ ಕಾರ್ಯದರ್ಶಿ ಸುಭಾಷ್ ಧರ್ಮನಗರ ಸ್ವಾಗತಿಸಿದರು. ಅಧ್ಯಕ್ಷ ರವೀಂದ್ರ ಬಂಗೇರ ಕೊಣಾಜೆ ಪ್ರಸ್ತಾವನೆಗೈದರು. ಕಾರ್ಯದರ್ಶಿ ಅಜಿತ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಯುವವಾಹಿನಿ ಅಧ್ಯಕ್ಷ ಹರೀಶ್ ಪೂಜಾರಿ ಕೊಣಾಜೆ ವಂದಿಸಿದರು.

ಬ್ರಹ್ಮಶ್ರೀ ನಾರಾಯಣಗುರುಗಳ ಪುನಃಪ್ರತಿಷ್ಠಾಪನೆ ಜತೆ ಅರ್ಚಕರಿಗೆ ವಿಶ್ರಾಂತಿ ಕೊಠಡಿ ಮತ್ತು ನೈವೇದ್ಯ ತಯಾರಿಕಾ ಕೊಠಡಿ ಕೆಲಸ ಪ್ರಗತಿಯಲ್ಲಿದೆ. ಇನ್ನಿತರ ಕೆಲಸ ವಾಡಬೇಕಿದ್ದು, 70 ಲಕ್ಷ ರೂ. ವೆಚ್ಚದ ಕೆಲಸಕ್ಕೆ ಯೋಜನೆ ರೂಪಿಸಲಾಗಿದೆ. ರವೀಂದ್ರ ಬಂಗೇರ, ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ https://www.vijayavani.net/alumni-reunion https://www.vijayavani.net/brahmakalashotsava-pre-meeting-at-puttige

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net