

ಕನಕಗಿರಿ: ಪಟ್ಟಣದ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಶ್ರೀ ಕನಕಾಚಲ ಜಾತ್ರೋತ್ಸವದ ನಿಮಿತ್ತ ಬುಧವಾರ ಅಂಕುರಾರ್ಪಣೆಯೊಂದಿಗೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಇದನ್ನೂ ಓದಿ:ಶ್ರೀ ಅಮರೇಶ್ವರ ಜಾತ್ರೋತ್ಸವಕ್ಕೆ ಭರದ ತಯಾರಿ
ಜಾತ್ರೆಯಲ್ಲಿ ಶ್ರೀ ಕನಕಾಚಲಪತಿ ಕಲ್ಯಾಣೋತ್ಸವಕ್ಕೆ ಸಂಪ್ರದಾಯದಂತೆ ರಾಜ ಪುರೋಹಿತರ ಮನೆಯಿಂದ ಭಾಜಾ ಭಜಂತ್ರಿಯೊಂದಿಗೆ ಪಲ್ಲಕ್ಕಿಯಲ್ಲಿ ತಾಳೆ ಗರಿಯ ಆಮಂತ್ರಣ ಪತ್ರಿಕೆ(ವಾಲಿ)ಯನ್ನು ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ನಂತರ ಧ್ವಜಸ್ತಂಭದ ಬಳಿ ಅರ್ಚಕರು ಶ್ರೀ ಕನಕಾಚಲಪತಿ ಜಾತ್ರೆ ಹಾಗೂ ಕಲ್ಯಾಣೋತ್ಸವಕ್ಕೆ ಭಕ್ತರಿಗೆ ವಾಲಿ ನೀಡಿ ಆಹ್ವಾನಿಸಿದರು.
ಅರ್ಚಕರಾದ ಮಧುರಕವಿ, ವಿ.ಸಿಂಗರಾಚಾರ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಯಾಳ, ಕಾರ್ಯದರ್ಶಿ ಸಿದ್ಧಲಿಂಗಯ್ಯ ಸ್ವಾಮಿ, ಪ್ರಮುಖರಾದ ಶ್ರೀನಿವಾಸರೆಡ್ಡಿ ಓಣಿಮನಿ, ಪೃಥ್ವಿರಾಜ್, ರಾಘವೇಂದ್ರ ಚಿತ್ರಗಾರ ಇತರರಿದ್ದರು.