ಕೊರಗಜ್ಜ ನೇಮೋತ್ಸವ ಆಮಂತ್ರಣ ಬಿಡುಗಡೆ

11
Published on

ಸುಳ್ಯ: ಸುಳ್ಯ ಜಯನಗರದ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಶ್ರೀ ಗುಳಿಗ ದೈವ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ನಡೆಯುವ ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳ ತಂಬಿಲ ಸೇವೆಯ ಆಮಂತ್ರಣ ಪತ್ರಿಕೆಯನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.

ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗಿ ಸರ್ಕಾರ ನಡೆಸಬೇಕೆಂದು ಭಾರತೀಯ ಜನತಾ ಪಾರ್ಟಿ ಜಯನಗರ ಬೂತ್ ಸಮಿತಿಯವರು ಸಾನ್ನಿಧ್ಯದಲ್ಲಿ ಸಂಕಲ್ಪ ಮಾಡಿಕೊಂಡ ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವೆ ಮೇ 17ರಂದು ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಲಿದ್ದಾರೆ.

ಕೊರಂಬಡ್ಕ ದೈವಸ್ಥಾನ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಅಂಗಾರ ಹಾಗೂ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಆಮಂತ್ರಣ ಬಿಡುಗಡೆ ಮಾಡಿದರು. ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ, ದೈವಸ್ಥಾನದ ಆಡಳಿತ ಕಾರ್ಯ ಸೇವಾ ಸಮಿತಿ ಅಧ್ಯಕ್ಷ ಕೇಶವ ಹೊಸಗದ್ದೆ, ಆರ್ಥಿಕ ಸಮಿತಿ ಪ್ರಮುಖರಾದ ಅಶೋಕ್ ಪ್ರಭು, ಉದ್ಯಮಿ ಕಸ್ತೂರಿ ಶಂಕರ್ ಹಳೆಗೇಟು, ಹಳೆಗೇಟು ಶಕ್ತಿಕೇಂದ್ರ ಪ್ರಮುಖರಾದ ರಮೇಶ್ ಇರಂತಮಜಲು, ಬೂತ್ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್ ಕೆ.ಆರ್., ಬಿಜೆಪಿ ನಗರ ಕಾರ್ಯದರ್ಶಿ ನಾರಾಯಣ ಶಾಂತಿನಗರ, ನಪಂ ಸದಸ್ಯರಾದ ಶಿಲ್ಪಾ ಸುದೇವ್, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಟ್, ಪ್ರಮುಖರಾದ ರಾಜೇಶ್ ಮೇನಾಲ, ಗುಣವತಿ ಕೊಲ್ಲಂತ್ತಡ್ಕ, ಶಿವನಾಥ ರಾವ್, ಹೇಮಂತ್ ಕಂದಡ್ಕ, ಮಂಜುನಾಥ ಬಳ್ಳಾರಿ, ದಯಾನಂದ ಕೇರ್ಪಳ, ಪ್ರದೀಪ್ ಕೊಲ್ಲರಮೂಲೆ, ಅಶೋಕ್ ಅಡ್ಕಾರ್, ಅವಿನಾಶ್ ಕುರುಂಜಿ, ರಜತ್ ಅಡ್ಕಾರ್, ಮಧುಕಿರಣ್, ದೈವಸ್ಥಾನ ಸಮಿತಿಯವರು ಇದ್ದರು.

ನೇಮೋತ್ಸವ ನಿರ್ವಹಣಾ ಸಂಚಾಲಕ ಜಿ.ಜಗನ್ನಾಥ ಜಯನಗರ ವಂದಿಸಿದರು. ನಗರ ಬಿಜೆಪಿ ನಗರ ಮಹಾ ಶಕ್ತಿಕೇಂದ್ರ ಅಧ್ಯಕ್ಷ ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು. ಆಮಂತ್ರಣ ಪತ್ರಿಕೆ ಬಿಡುಗಡೆಗೆ ಮುನ್ನ ಕೊರಂಬಡ್ಕ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ, ಗುಳಿಗ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net