

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಕಾಲೇಜ್ ಆಫ್ ಬಿಜಿನೆಸ್ ಆಡ್ಮಿನಿಸ್ಟ್ರೆಶನ್ನಲ್ಲಿ "ಇನ್ವೆಸ್ಟರ್ ಫೈನಾನ್ಸಿಯಲ್ ಎಜ್ಯುಕೇಶನ್ ಸೆಬಿ- ನಿಸ್ಮಾ' ಕುರಿತು ಇತ್ತೀಚೆಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಮಹಾಂತೇಶ ಕುರಿ, ವಿದ್ಯಾರ್ಥಿಗಳಿಗೆ ಇರುವ ಉದ್ಯೋಗಾವಕಾಶ, ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಇತ್ಯಾದಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಡಾ. ಶೋಭಾ ಕ್ಯಾತನವರ ಕಾರ್ಯಾಗಾರದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.