ವೈಜ್ಞಾನಿಕ ರಂಗದ ಹೂಡಿಕೆ ಪ್ರಗತಿಗೆ ಪೂರಕ

16-12-Shiva-3
ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿ ಡಾ.ಬಿ.ಎಚ್.ಎಂ.ದಾರುಕೇಶ ಮಾತನಾಡಿದರು. ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ, ಪಿಯು ಡಿಡಿಪಿಐ ಸೋಮಶೇಖರಪ್ಪ ಹೊಕ್ರಾಣಿ, ಕಾಲೇಜು ಪ್ರಾಚಾರ್ಯ ಡಾ.ಯಂಕಣ್ಣ, ಪ್ರಾಧ್ಯಾಪಕರಾದ ಡಾ.ಪ್ರಾಣೇಶ ಕುಲಕರ್ಣಿ ಇದ್ದರು.
Published on

ರಾಯಚೂರು: ವೈಜ್ಞಾನಿಕ ರಂಗದಲ್ಲಿನ ಹೂಡಿಕೆಯ ಬೆಳವಣಿಗೆಯನ್ನು ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗಿರುವುದನ್ನು ನಾವು ಕಾಣಬಹುದಾಗಿದ್ದು, ಒಂದು ದೇಶದ ಪ್ರಗತಿಯಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿನ ಸಂಶೋಧನೆಗಳು ಕಾರಣೀಭೂತವಾಗಿರುತ್ತವೆ ಎಂದು ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಸ್ರೋ ವಿಜ್ಞಾನಿ ಡಾ.ಬಿ.ಎಚ್.ಎಂ.ದಾರುಕೇಶ ಜತೆ ಶುಕ್ರವಾರ ಸಂಜೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ವಿಜ್ಞಾನಿಗಳು ಚಂದ್ರನ ದಕ್ಷಿಣ ದೃವದಲ್ಲಿ ಉಪಗ್ರಹ ಇಳಿಸುವ ಮೂಲಕ ಪ್ರಭುದ್ಧತೆ ಮೆರೆದಿದ್ದಾರೆ ಎಂದರು.
ಪಿಯು ಡಿಡಿಪಿಐ ಸೋಮಶೇಖಪ್ಪ ಹೊಕ್ರಾಣಿ ಮಾತನಾಡಿ, ವಿಜ್ಞಾನದ ಅರಿವು ಮತ್ತು ಮಾಹಿತಿ ಪ್ರತಿಯೊಬ್ಬರಿಗೂ ಇರಲೇ ಬೇಕು. ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹೊಸತನದ ಹುಡುಕಾಟದಲ್ಲಿ ಮುಂದುವರಿಯಬೇಕು ಎಂದು ಹೇಳಿದರು.
ಇಸ್ರೋ ವಿಜ್ಞಾನಿ ಡಾ.ಬಿ.ಎಚ್.ಎಂ.ದಾರುಕೇಶ ಮಾತನಾಡಿ, ಮಧ್ಯಪ್ರದೇಶದಲ್ಲಿ ಜಬೂಹ ಪ್ರದೇಶದಲ್ಲಿ ಸಾಮಾಜಿಕ ಬದುಕಿನ ಅಧ್ಯಯನ ಮಾಡಲು ಅಮೇರಿಕಾದ ತಂತ್ರಜ್ಞಾನ ಅನುಕೂಲಕರವಾಗಿದ್ದು, ಅದಲ್ಲಿನ ಜನರ ಬದುಕು ಬದಲಾವಣೆಗೆ ಕಾರಣವಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಸಂವಾದದಲ್ಲಿ ಚಂದ್ರಯಾನ-3 ಸಲತೆ, ಉಪಗೃಹಗಳ ಉಡಾವಣೆ ಮತ್ತು ಸೌರಮಂಡಲದ ಕುರಿತು ಕೇಳಿದ ಪ್ರಶ್ನೆಗಳಿಗೆ ಡಾ.ಬಿ.ಎಚ್.ಎಂ.ದಾರುಕೇಶ ಸವಿವರವಾಗಿ ಉತ್ತರಿಸಿದರು. ಕಾಲೇಜು ಪ್ರಾಚಾರ್ಯ ಡಾ.ಯಂಕಣ್ಣ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯ ಡಾ.ಪ್ರಾಣೇಶ ಕುಲಕರ್ಣಿ, ಡಾ.ಶಿವಯ್ಯ ಹಿರೇಮಠ, ಇಶ್ರತ್ ಬೇಗಂ, ಡಾ.ಚಂದ್ರಶೇಖರ ಸಜ್ಜನ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net