

ರಾಣೆಬೆನ್ನೂರ: ವರ್ಕ ಪ್ರಾಂ ಹೋಮ್ ಕೆಲಸ ಮಾಡಲು ಹಣ ಹೂಡಿಕೆ ಮಾಡಿದರೆ ಅದರಿಂದ ಹೆಚ್ಚಿನ ಲಾಭ ಬರಲಿದೆ ಎಂದು ನಂಬಿಸಿ ಸರ್ಕಾರಿ ಅಧಿಕಾರಿಯೊಬ್ಬರಿಗೆ 2.67 ಲಕ್ಷ ರೂ. ವಂಚಿಸಿದ ಘಟನೆ ಕುರಿತು ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿಯ ಮೃತ್ಯುಂಜಯ ನಗರದ ನಿವಾಸಿ ವಾಣಿಶ್ರೀ (32) ಮೋಸ ಹೋದವರು.
ಇವರು ದಾವಣಗೆರೆಯಲ್ಲಿ ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕರ ಕಚೇರಿಯಲ್ಲಿ ಕೋ ಆಡಿರ್ನೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಕರೆ ಮಾಡಿದ ಅಪರಿಚಿತರು ನೀವು ವರ್ಕ ಪ್ರಾಂ ಹೋಮ್ ಕೆಲಸ ಮಾಡಲು ಹಣ ಹೂಡಿಕೆ ಮಾಡಿದರೆ ಅದರಿಂದ ಹೆಚ್ಚಿನ ಲಾಭ ಕೊಡಿಸುತ್ತೇವೆ ಎಂದು ನಂಬಿಸಿದ್ದಾರೆ. ಇವರು 2.67 ಲಕ್ಷ ರೂ. ಹಾಕುತ್ತಿದ್ದಂತೆ ಅವರು ಲಾಭಾಂಶ ಹಾಗೂ ಹಾಕಿದ ಹಣ ಕೂಡ ನೀಡದೆ ವಂಚಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.