ಆರ್‌ಒಗಳ ನಿರ್ಮಾಣ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

PHOTO-1 (1)--111
Published on

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ನಿರ್ಮಿತಿ ಕೇಂದ್ರದಿಂದ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಕಳಪೆಯಾಗಿವೆ ಎಂದು ಆರೋಪಿಸಿ ರಾಷ್ಟ್ರೀಯ ಪ್ರಬುದ್ದ ಸೇನೆ ಕಾರ‌್ಯಕರ್ತರು ಡಿಸಿ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಡಿಸಿ ಕಚೇರಿ ಸಮೀಪ ಧರಣಿ ಕುಳಿತ ಕಾರ‌್ಯಕರ್ತರು ಕಳಪೆ ನಿರ್ಮಾಣದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸೂಕ್ತ ತನಿಖೆಗೆ ಆಗ್ರಹಿಸಿ ಡಿಸಿಗೆ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಪ್ರಬುದ್ದ ಸೇನೆ ಅಧ್ಯಕ್ಷ ಸಿ.ಎಲ್.ಅವಿನಾಶ್, ಪಿ.ಅನುಷ್,ಡಿ.ಒ.ನವೀನ್‌ಕುಮಾರ್, ಎಸ್.ಸಾಗರ್‌ಕುಮಾರ್,ಮಹಾಂ ತೇಶ್,ಸುರೇಶ್,ಶಿವರುದ್ರಪ್ಪ,ಉಮೇಶ್,ಅಖಿಲೇಶ್,ಸಂಪತ್, ರಘು,ರಮೇಶ್,ಜಿ.ಮಾರುತಿ,ಹೇಮಂತ್ ಇತರರು ಪ್ರತಿಭಟನೆಯಲ್ಲಿ ದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net