ಆಹಾರ ಇಲಾಖೆಯಲ್ಲಿನ ಅವ್ಯವಹಾರ ತನಿಖೆ ನಡೆಸಿ

21-09-Shiva-2
ಆಹಾರ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಜಯ ಕರ್ನಾಟಕ ಸಂಘಟನೆ, ದಸಂಸ, ರಾಷ್ಟ್ರೀಯ ಸಮಾಜ ಪರಿವರ್ತನಾ ಸಮಿತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಪದಾಕಾರಿಗಳಾದ ಶಿವಕುಮಾರ ಯಾದವ್, ಎಂ.ಮಾರೆಪ್ಪ, ಪ್ರಕಾಶಕುಮಾರ, ತಿಮ್ಮಪ್ಪಸ್ವಾಮಿ, ಸತೀಶಕುಮಾರ, ನರಸಿಂಹಲು, ಶಂಷಾವಲಿ, ತಿಮ್ಮಪ್ಪ ಕಡಗೋಲ, ಸಿದ್ದಪ್ಪ ಮನ್ಸಲಾಪುರ, ಪಿ.ನವೀನಕುಮಾರ, ಗೋವಿಂದಪ್ಪ, ಆಂಜಿನಯ್ಯ, ಜಂಬಣ್ಣ ಇದ್ದರು.
Published on

ರಾಯಚೂರು: ಜಿಲ್ಲೆಯ ಆಹಾರ ಇಲಾಖೆಯಲ್ಲಿನ ಪಡಿತರ ಚೀಟಿ ಹಾಗೂ ಸೀಮೆ ಎಣ್ಣೆ ವಿತರಣೆಗೆ ಸಂಬಂಸಿದಂತೆ ನಡೆದಿರುವ ಅವ್ಯವಹಾರ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಅಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಜಯ ಕರ್ನಾಟಕ ಸಂಘಟನೆ, ದಸಂಸ, ರಾಷ್ಟ್ರೀಯ ಸಮಾಜ ಪರಿವರ್ತನಾ ಸಮಿತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಸುಮಾರು 2 ಕೋಟಿ ರೂ. ಹಣವನ್ನು ನಿಯಮ ಉಲ್ಲಂಸಿ ಅಕಾರಿಗಳು ಸ್ವಂತಕ್ಕೆ ಬಳಸಿಕೊಂಡು ಭ್ರಷ್ಟಾಚಾರ ಎಸಗಿದ್ದು, ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿಂದಿನ ಉಪ ನಿರ್ದೇಶಕ ಅರುಣಕುಮಾರ ಸಂಗಾವಿ, ಆಹಾರ ನಿರೀಕ್ಷಕರಾದ ಬಿ.ಆರ್.ಯಂಕಣ್ಣ, ಖಲೀಲ್ ಅಹ್ಮದ್ ಮತ್ತು ಶಿರಸ್ತೇದಾರರು ಸೇರಿಕೊಂಡು ಹೊಸ ಪಡಿತರ ಚೀಟಿ ಹಾಗೂ ಸೀಮೆಎಣ್ಣೆಗೆ ಸಂಬಂಸಿದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ಸಂಬಂಸಿದ ಅಕಾರಿಗಳ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಶಿಕ್ಷೆಗೆ ಗುರಿಪಡಿಸಬೇಕು. ಲೂಟಿ ಮಾಡಿದ ಹಣವನ್ನು ದಂಡ ಸಮೇತ ವಸೂಲಿ ಮಾಡಬೇಕು. ಭ್ರಷ್ಟಾಚಾರಕ್ಕೆ ನೇರ ಹೊಣೆಗಾರರಾದ ಆಹಾರ ಇಲಾಖೆ ಆಯುಕ್ತರು, ಜಿಲ್ಲಾಕಾರಿ ಮೇಲೆ ಕಾನೂನು ಕ್ರಮಿಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆಗಳ ಪದಾಕಾರಿಗಳಾದ ಶಿವಕುಮಾರ ಯಾದವ್, ಎಂ.ಮಾರೆಪ್ಪ, ಪ್ರಕಾಶಕುಮಾರ, ತಿಮ್ಮಪ್ಪಸ್ವಾಮಿ, ಸತೀಶಕುಮಾರ, ನರಸಿಂಹಲು, ಶಂಷಾವಲಿ, ತಿಮ್ಮಪ್ಪ ಕಡಗೋಲ, ಸಿದ್ದಪ್ಪ ಮನ್ಸಲಾಪುರ, ಪಿ.ನವೀನಕುಮಾರ, ಗೋವಿಂದಪ್ಪ, ಆಂಜಿನಯ್ಯ, ಜಂಬಣ್ಣ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net