ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ: 72 ಸಾವಿರ ಕೋಟಿ ರೂಪಾಯಿ ಹೂಡಿಕೆಗೆ ಒಪ್ಪಂದ

h13-Invest Karnataka 8
Published on

ಹುಬ್ಬಳ್ಳಿ: ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ ನಿರೀಕ್ಷೆಗೂ‌ ಮೀರಿದ ಯಶಸ್ವಿಯಾಗಿದ್ದು, ಒಟ್ಟು 51 ಕಂಪನಿಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ಜಗದೀಶ್ ಶೆಟ್ಟರ್ ಹೇಳಿದರು.

ಸಮಾವೇಶದ ಬಳಿಕ ಡೆನಿಸ್ಸನ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಮಾವೇಶದ ಕುರಿತು ಮಾಹಿತಿ ನೀಡಿದರು. ಇನ್ವೆಸ್ಟ್ ಕರ್ನಾಟಕ ನಿರೀಕ್ಷೆಗೂ ಮೀರಿ ಯಶಸ್ವಿಗೊಂಡಿದೆ. 1500 ಕ್ಕೂ ಹೆಚ್ಚು ಉದ್ಯಮಿಗಳು ಆಗಮಿದ್ದರು. 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಯು ಈ ಸಮಾವೇಶದ ಯಶಸ್ವಿಗೆ ಸಾಕ್ಷಿಯಾದವು. ಒಡ್ಟು ಸಮಾವೇಶದಲ್ಲಿ 51 ಕಂಪನಿಗಳೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದ್ದು, 72 ಸಾವಿರ ಕೋಟಿ ಹೂಡಿಕೆ ಹರಿದು ಬರಲಿದೆ. ಇದರಿಂದ 90 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ.

ಕಂಪನಿಗಳು: ರಾಜೇಶ್ ಎಕ್ಸ್‌ಫೋರ್ಟ್ಸ್‌ ಲಿಮಿಟೆಡ್ 50 ಸಾವಿರ ಕೋಟಿ, ಸೊನಾಲಿ ಪವರ್ ಪ್ರೈವೆಟ್ ಲಿಮಿಟೆಡ್ ಕಂಪನಿಯು 4800 ಕೋಟಿ ರೂಪಾಯಿ, ನ್ಯಾಟ್‌ಕ್ಯಾಪ್ ಪವರ್ ಪ್ರೈವೆಟ್ ಲಿಮಿಟೆಡ್ 3000 ಕೋಟಿ ರೂಪಾಯಿ, ಜೆಟ್‌ವಿಂಗ್ಸ್ ಏರೋಸ್ಪೇಸ್ ಆ್ಯಂಡ್ ಏವಿಯೇಷನ್ 2060 ಕೋಟಿ ರೂಪಾಯಿ, ಅಯನಾ ರಿನಿವೆಬಲ್ ಪವರ್ ಪ್ರೈವೆಟ್ ಲಿಮಿಟೆಡ್ 3000 ಕೋಟಿ ರೂಪಾಯಿ, ಲುಗ್ಸೋರ್ ಎನರ್ಜಿ ಪ್ರೈವೆಟ್ ಲಿಮಿಟೆಡೆ 1200 ಕೋಟಿ ರೂಪಾಯಿ, ಭಾಗೀರಥ ಕೆಮಿಕಲ್ಸ್, ಎಚ್‌ಪಿಸಿ, ಐಒಸಿ, ಪವರ್ ರಿನ್ಯೂ, ಗುಜರಾತ್ ಅಂಬುಜಾ, ಕೆಎಲ್ಇ ಸೊಸೈಟಿ, ದೊಡ್ಲಾ ಡೈರಿ, ಎಸಿಸಿ ಲಿಮಿಟೆಡ್, ಡೆಪೆಡ್ರೊ ಶುಗರ್, ವುಕ್ಸಿ ಮೆಂಗ್ಯಾಂಗ್ ಮೆಷಿನರಿ ಕಂಪನಿಗಳು ಕೂಡ ಹೂಡಿಕೆ ಮಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net