

ಹಾವೇರಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗ(ಐಎನ್‌ಟಿಯುಸಿ)ದ ಜಿಲ್ಲಾಧ್ಯಕ್ಷರಾಗಿ ಸವಣೂರ ತಾಲೂಕಿನ ತೆಗ್ಗಿಹಳ್ಳಿಯ ಎಂ.ಎಂ.ಕಾಲೇಭಾಗ ನೇಮಕಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೆಪಿಸಿಸಿ ಐಎನ್‌ಟಿಯುಸಿ ಕಾರ್ಯಕಾರಿ ಸಭೆಯಲ್ಲಿ ಐಎನ್‌ಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಡಾ.ಸಂಜೀವ ರೆಡ್ಡಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆದೇಶದ ಮೇರೆಗೆ ಐಎನ್‌ಟಿಯುಸಿ ರಾಜ್ಯಾಧ್ಯಕ್ಷ ಲಕ್ಷ್ಮೀ ವೆಂಕಟೇಶ ಅವರು ಎಂ.ಎಂ.ಕಾಲೇಭಾಗ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹೊಸಳ್ಳಿಯ ಎ.ಎಂ.ಪಟ್ಟೇಗಾರ ಅವರನ್ನು ನೇಮಿಸಲಾಗಿದೆ ಎಂದು ಐಎನ್‌ಟಿಯುಸಿ ಪ್ರಕಟಣೆ ತಿಳಿಸಿದೆ.