

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಆಷಾಢ ವಾಸದಲ್ಲಿ ಒಂದೇ ಸೂರಿನಡಿ ಗ್ರಾಮದ ಸಂಜೀವಿನಿ ಮಹಿಳೆಯರು ಒಗ್ಗೂಡಿಕೊಂಡು ಅಳಿದು ಹೋದ ಕರಾವಳಿ ಶೈಲಿಯ ಆಟೋಟಗಳನ್ನು ಆಡಿಸಿ, ಹಿಂದಿನ ಕಾಲದಲ್ಲಿ ವಾಡುತ್ತಿದ್ದ ತಿನಿಸುಗಳನ್ನು ತಯಾರಿಸಿರುವುದು ಬಾಲ್ಯದ ಕ್ಷಣಗಳನ್ನು ನೆನಪಿಸಿತು. ಇಂದಿನ ಪೀಳಿಗೆಗೆ ಅವುಗಳನ್ನು ಪರಿಚಯ ವಾಡುವುದು ಅಗತ್ಯ ಎಂದು ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಹೇಳಿದರು.
ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಸಂಜೀವಿನಿ, ಉಡುಪಿ ಜಿಪಂ, ಕುಂದಾಪುರ ತಾಪಂ, ಗುಜ್ಜಾಡಿ ಗ್ರಾಪಂ, ಗಂಗೊಳ್ಳಿ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಗುಜ್ಜಾಡಿ ಸಮೃದ್ಧಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ವತಿಯಿಂದ ನಾಯಕವಾಡಿಯ ಶ್ರೀರಾಮ ಮಂದಿರದಲ್ಲಿ ಭಾನುವಾರ ನಡೆದ ಸಂಭ್ರಮದ ಆಷಾಢ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ನಂದಿನಿ ಗುಜ್ಜಾಡಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುವಾನ ವಿತರಿಸಲಾಯಿತು. ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಕರ್ನಾಟಕ ಹಾಸ್ಯ ಕಲಾರತ್ನ ಪ್ರಶಸ್ತಿ ವಿಜೇತ ನಾಗರಾಜ್ ಗಾಣಿಗ, ಶ್ರೀಪತಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ, ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಚಿತ್ತಾರ ಸಂಜೀವಿನಿ ತಾಲೂಕು ಒಕ್ಕೂಟ ಅಧ್ಯಕ್ಷೆ ರೋಷಿನಿ ಶೆಟ್ಟಿ, ಗುಜ್ಜಾಡಿ ಗ್ರಾಪಂ ಕಾರ್ಯದರ್ಶಿ ಶಕುಂತಲಾ, ಚಿತ್ತಾರ ತಾಲೂಕು ಒಕ್ಕೂಟದ ವಾಜಿ ಅಧ್ಯಕ್ಷೆ ವಿಜಯ ಗಾಣಿಗ, ಗುಜ್ಜಾಡಿ ಗ್ರಾಪಂ ಸದಸ್ಯರಾದ ಹರೀಶ್ ಮೇಸ್ತ, ರಾಜು ಪೂಜಾರಿ, ಲೋಲಾಕ್ಷಿ ಪಂಡಿತ್, ಜೆೆಸಿಂತಾ, ಯಮುನಾ, ತಾಪಂ ಎನ್‌ಆರ್‌ಎಲ್‌ಎಂ ವಲಯ ಮೇಲ್ವಿಚಾರಕಿಯರಾದ ಮಮತಾ, ಹರ್ಷಿತಾ, ಬೈಂದೂರು ವಲಯ ಮೇಲ್ವಿಚಾರಕ ಮಹೇಂದ್ರ, ತಾಪಂ ಸಿಬ್ಬಂದಿ ಚೈತ್ರಾ, ಯಮುನಾ, ಸಿತಾರ, ಸಂಜೀವಿನಿ ಒಕ್ಕೂಟ ಪದಾಧಿಕಾರಿಗಳಾದ ವಾಣಿ, ಲಲಿತಾ, ಶೋಭಾ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ವೀಣಾ ಮೇಸ್ತ, ದೀಪ ಮೇಸ್ತ, ವೀಣಾ, ಕೃಷಿ ಸಖಿ ಪ್ರಿಯಾಂಕಾ, ಪಶು ಸಖಿ ಸಾವಿತ್ರಿ, ಸ್ವ-ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು. ರೇಷ್ಮಾ ಸ್ವಾಗತಿಸಿದರು. ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.