

ಹೊನ್ನಾಳಿ: ಮಣ್ಣಿನ ಫಲವತ್ತತೆ ಉಳಿಸಲು ರೈತರು ವಿಷಮುಕ್ತ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ವಿಷಮುಕ್ತ ಕೃಷಿ ಸಮೃದ್ಧ ರೈತ ಯೋಜನೆಯಡಿ ಸಾವಯವ ಕೃಷಿ ಉತ್ತೇಜನಗೊಳಿಸಲು ಭಾನುವಾರ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಷಮುಕ್ತ ಸಾವಯವ ಗೊಬ್ಬರ ಪರಿಚಯಿಸಿ ಅವರು ಮಾತನಾಡಿದರು.
ಹೆಚ್ಚಿನ ಫಸಲು ಗಳಿಸುವ ಉದ್ದೇಶದಿಂದ ನಿರಂತರವಾಗಿ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಸಂಪೂರ್ಣ ಕ್ಷೀಣಿಸಿದೆ. ಮಣ್ಣು ಸಂರಕ್ಷಣೆ ಅತಿ ಮುಖ್ಯವಾಗಿದ್ದು, ಸಾವಯವ ಗೊಬ್ಬರ ಉಪಯೋಗಿಸಿ ಮಣ್ಣಿನ ಫಲವತ್ತತೆ ಹೆಚ್ಚು ಮಾಡಬೇಕೆಂದರು.
ವಿಷಮುಕ್ತ ಕೃಷಿ ಸಮೃದ್ಧ ರೈತ ಯೋಜನೆ ವ್ಯವಸ್ಥಾಪಕ ಓಂಕಾರಗೌಡ, ಸಿಬ್ಬಂದಿ ನಾಗರಾಜ್, ಮಲ್ಲಿಕಾರ್ಜುನ ಬೆಳಲಗೆರೆ, ಶ್ರೀನಿವಾಸ ಬೆಳಲಗೆರೆ, ಕೂಲಂಬಿ ಮುರುಗೇಶಪ್ಪ, ಕುಂಬಳೂರು ಡಿ.ಸಿ. ಹನುಮಂತಪ್ಪ ಇತರರು ಇದ್ದರು.