ಜಗತ್ತಿಗೆ ಭಾರತದ ಶಕ್ತಿ ಪರಿಚಯ

Introducing India's power to the world
ಮುಧೋಳದಲ್ಲಿ ಬುಧವಾರ ಆಯೋಜಿಸಿದ್ದ ತಿರಂಗಾ ಯಾತ್ರೆಯಲ್ಲಿ ಮುಖಂಡರಾದ ಅರುಣ ಕಾರಜೋಳ, ನಾರಾಯಣ ಯಡಹಳ್ಳಿ, ಸಂಗಣ್ಣ ಕಾತರಕಿ, ಕರಬಸಯ್ಯ ಹಿರೇಮಠ ಇದ್ದರು.
Published on

ಮುಧೋಳ: ರಾಷ್ಟ್ರ ರಕ್ಷಣೆಗಾಗಿ ನಾಗರಿಕರ ನಡೆ ಎಂಬ ಧ್ಯೇಯ ವಾಕ್ಯದೊಂದಿಗೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ಯಾತ್ರೆ ಯಶಸ್ವಿಯಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ತಿರಂಗಾ ಯಾತ್ರೆ, ನಗರದ ಪ್ರಮುಖ ರಸ್ತೆ ಮೂಲಕ ಶಿವಾಜಿ ವೃತ್ತದಲ್ಲಿ ದೇಶಭಕ್ತಿ ಘೋಷಣೆಯೊಂದಿಗೆ ಸಮಾವೇಶಗೊಂಡಿತು.

ಬಿಜೆಪಿ ಯುವ ಮುಖಂಡ ಅರುಣ ಕಾರಜೋಳ ಮಾತನಾಡಿ, ಪಾಕಿಸ್ತಾನದಲ್ಲಿ ಉಗ್ರಗಾಮಿಗಳನ್ನು ತಯಾರು ಮಾಡುವ ನೆಲೆಗಳನ್ನು ಕೇವಲ 27 ಸೆಕೆಂಡ್‌ಗಳಲ್ಲಿ ನಮ್ಮ ಯೋಧರು ಧ್ವಂಸಗೊಳಿಸಿದ್ದಾರೆ. ದೇಶದ ವ್ಯವಸ್ಥೆ ಬುಡಮೇಲು ಮಾಡುವವರಿಗೆ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ. ಒಂದು ಜನಾಂಗದ ಓಲೈಕೆಗಾಗಿ ನಮ್ಮ ಪಾಕಿಸ್ತಾನ ಎನ್ನುವ ಮಟ್ಟಿಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡುವುದನ್ನು ಮುಂದುವರಿಸಿದ್ದಾರೆ ಎಂದರು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗಣ್ಣ ಕಾತರಕಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಗುರುಪಾದ ಕುಳಲಿ ಮಾತನಾಡಿ, ಭಾರತ ಶಾಂತಿಪ್ರಿಯ ದೇಶವಾದರೂ ನಮ್ಮನ್ನು ತುಳಿಯಲು ಬಂದವರನ್ನು ಸುಮ್ಮನೆ ಬಿಡಲ್ಲ ಎನ್ನುವ ಎಚ್ಚರಿಕೆಯನ್ನು ಆಪರೇಷನ್ ಸಿಂಧೂರ ನೀಡಿದೆ. ಸೈನಿಕರಿಂದಾಗಿ ನಾವೆಲ್ಲ ಸುರಕ್ಷಿತವಾಗಿದ್ದೇವೆ. ಅಂತಹ ಸೈನಿಕರಿಗೆ ಶಕ್ತಿ ತುಂಬುವ ತಿರಂಗಾ ಯಾತ್ರೆ ಯಶಸ್ವಿಯಾಗಿದೆ ಎಂದರು.

ವೆಂಕಣ್ಣ ಕಳ್ಳಿಗುದ್ದಿ ಮಾತನಾಡಿ, ಜನರನ್ನು ಗುರಿಯಾಗಿಸದೆ ಉಗ್ರರನ್ನು ಹಾಗೂ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿರುವುದನ್ನು ಜಗತ್ತೇ ಮೆಚ್ಚಿಕೊಂಡಿದೆ. ಭಾರತದ ಶಕ್ತಿ ಜಗತ್ತಿಗೆ ಗೊತ್ತಾಗಿದೆ. ಇಂದಿನ ಯುವಶಕ್ತಿಗೆ ದೇಶಭಕ್ತಿಯ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ (ರಾಜು) ಯಡಹಳ್ಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕರಬಸಯ್ಯ ಹಿರೇಮಠ ಮಾತನಾಡಿದರು.

ಮಾಜಿ ಮೇಜರ್ ಅಪ್ಪಾಸಾಹೇಬ ನಿಂಬಾಳಕರ, ಗುರುಪಾದ ಕುಳಲಿ, ಆನಂದ ಬಡಿಗೇರ, ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಎಸ್.ಜಿ. ಪಸಾರ, ಮಾಜಿ ಸೈನಿಕ ಕೆ.ಆರ್. ಮಾಚಪ್ಪನವರ, ಗುರುಪಾದ ಕುಳಲಿ, ಶ್ರೀಶೈಲ ಚಿಣ್ಣನವರ, ಧರೆಪ್ಪ ಸಾಂಗ್ಲಿಕರ, ನಾಗಪ್ಪ ಅಂಬಿ, ಸದಾಶಿವ ಇಟಕನ್ನವರ, ವೆಂಕಣ್ಣ ಕಳ್ಳಿಗುದ್ದಿ, ಪ್ರದೀಪ ನಿಂಬಾಳಕರ, ಅನುಪ ಚವಾಣ, ಪ್ರಜ್ವಲ್ ಚಿಮ್ಮಡ, ಸುಮೇದಾ ಮಾನೆ, ವನಜಾಕ್ಷಿ ಮಂಟೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net