

ವಿಜಯವಾಣಿ ಸುದ್ದಿಜಾಲ ಹೆಬ್ರಿ
ನಿವೃತ್ತ ಶಿಕ್ಷಕ ಕೆ.ಕೃಷ್ಣಮೂರ್ತಿ ರಾವ್ ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಸರಿಯಾದ ವಾರ್ಗದಲ್ಲಿ ನಡೆಯುವಂತೆ ವಾಡಿದವರು. ನಿವೃತ್ತ ಶಿಕ್ಷಕರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಗಳ ಮೂಲಕ ಹಿರಿಯ ಶಿಕ್ಷಕರನ್ನು ಸನ್ಮಾನಿಸುವುದು ಸವಾಜದಲ್ಲಿ ಧನಾತ್ಮಕ ಪರಿಣಾಮ ಉಂಟು ವಾಡುತ್ತದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಉಳಿಸುವ, ಕಲಿಸುವ ಕಾರ್ಯವಾಗುತ್ತದೆ ಎಂದು ಹೆಬ್ರಿ ತಾಲೂಕು ಕಸಾಪ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಹೆಬ್ರಿ ತಾಲೂಕು ಕಸಾಪ ಟಕ ವತಿಯಿಂದ ಗುರುವಾರ ಹಿರಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷ್ಷಕ ಕೆ.ಕೃಷ್ಣ್ಣಮೂರ್ತಿರಾವ್ ಅವರನ್ನು ಹೆಬ್ರಿಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ವಾತನಾಡಿದ ಕೃಷ್ಣ್ಣಮೂರ್ತಿ ರಾವ್, ನಿವೃತ್ತಿಯ ಈ ಕಾಲದಲ್ಲಿ ಶಿಷ್ಯರು, ಒಡನಾಡಿಗಳನ್ನು ಕೂಡಿಸಿಕೊಂಡು ಹಿರಿಯ ಶಿಕ್ಷಕರನ್ನು ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಅಭಿನಂದನೀಯ ಎಂದರು.
ಜಯಂತಿ ಕೃಷ್ಣ್ಣಮೂರ್ತಿರಾವ್, ಉಪನ್ಯಾಸಕಿ ಡಾ.ಸುಲತಾ ಹೆಗ್ಡೆ, ಹಿರಿಯರಾದ ಬಾಲಚಂದ್ರ ಮುದ್ರಾಡಿ, ಎಚ್.ಜನಾರ್ದನ್, ಬಾಲಚಂದ್ರ ಹೆಬ್ಬಾರ್, ವೀಣಾ ಆರ್.ಭಟ್, ರಾಮಚಂದ್ರ ಭಟ್, ಪ್ರವೀಣಕುವಾರ್ ಶೆಟ್ಟಿ, ಸದಾಶಿವ ಬಾಯರಿ, ಸಂತೋಷ್ ಕುವಾರ್ ಶೆಟ್ಟಿ, ಅನಿತಾ, ಮಹೇಶ್ ಉಪಸ್ಥಿತರಿದ್ದರು. ಪುಷ್ಪಾವತಿ ಹೆಬ್ರಿ ಪ್ರಾರ್ಥಿಸಿದರು. ವಿದ್ಯಾ ಜನಾರ್ದನ್ ಸನ್ಮಾನ ಪತ್ರ ವಾಚಿಸಿದರು. ಪದಾಧಿಕಾರಿಗಳಾದ ಮಹೇಶ ಹೈಕಾಡಿ ಸ್ವಾಗತಿಸಿದರು. ಪ್ರೀತೇಶಕುವಾರ್ ವಂದಿಸಿದರು. ಮಂಜುನಾಥ ಕೆ.ಶಿವಪುರ ಕಾರ್ಯಕ್ರಮ ನಿರೂಪಿಸಿದರು.