ಸೈನಿಕರ ಬದುಕನ್ನು ಯುವ ಸಮುದಾಯಕ್ಕೆ ಪರಿಚಯಿಸಿ

Introduce the life of soldiers to the youth community
ತೇರದಾಳ ಪಟ್ಟಣದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ನಿವೃತ್ತ ಯೋಧ ಸಿದ್ದಾರೂಢ ಉಪ್ಪಾರ ಅವರ ಸ್ವಾಗತ ಸಮಾರಂಭಕ್ಕೆ ಪ್ರಭು ಶ್ರೀ, ಪಿಎಸ್‌ಐ ಅಪ್ಪು ಐಗಳಿ, ನಂದು ಗಾಯಕವಾಡ ಚಾಲನೆ ನೀಡಿದರು. ಈರಪ್ಪ ತಾರದಾಳ, ಸಂತೋಷ ಜಮಖಂಡಿ, ಅಪ್ಪಾಸಾಬ ಮೋಪಗಾರ, ರಮೇಶ ಪಟ್ಟಣಶೆಟ್ಟಿ ಮತ್ತಿತರರಿದ್ದಾರೆ.
Published on

ತೇರದಾಳ: ಸೈನಿಕರ ಉಳಿವಿಗಾಗಿ ಸ್ವದೇಶಿ ವಸ್ತುಗಳನ್ನು ಬಳಸಿ, ವಿದೇಶಿ ವಸ್ತುಗಳನ್ನು ಬಿಸಾಡುವಂತೆ ಮುಖಂಡ ಶಿವಾನಂದ ಗಾಯಕವಾಡ ಕರೆ ನೀಡಿದರು.

ಪಟ್ಟಣದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ನಿವೃತ್ತ ಸೈನಿಕ ಸಿದ್ಧಾರೂಢ ಉಪ್ಪಾರ ಅವರ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಸಮೂಹಕ್ಕೆ ಸೈನಿಕರ ಬದುಕಿನ ಚಿತ್ರಣ ತೆರದಿಡುವ ಮೂಲಕ ಅವರ ಮೌಲ್ಯವನ್ನು ಎತ್ತಿ ಹಿಡಿಯಬೇಕು. ಬ್ರೀಟಿಷರ ಬಳುವಳಿಯಾದ ಪ್ರೇಮಿಗಳ ದಿನ ಆಚರಿಸದೆ, ಅಂದು ಹುತಾತ್ಮರಾದ 44 ಯೋಧರನ್ನು ಸ್ಮರಿಸುವ ಕಾರ್ಯವಾಗಬೇಕು. ಪ್ರಧಾನಿ ನರೇಂದ್ರ ಮೋದಿ ಸೈನಿಕರಿಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಪಿಎಸ್‌ಐ ಅಪ್ಪು ಐಗಳಿ ಮಾತನಾಡಿ, ಕಷ್ಟಗಳನ್ನು ದಾಟಿ ಶಿಸ್ತುಬದ್ಧವಾಗಿ ದೇಶ ಸೇವೆ ಮಾಡುವ ಯೋಧರ ಸೇವೆ ಅಮೂಲ್ಯವಾಗಿದೆ ಎಂದರು.

ನಿವೃತ್ತ ಸೈನಿಕ ಸಿದ್ಧಾರೂಢ ದಂಪತಿಯನ್ನು ತೆರೆದ ವಾಹನದಲ್ಲಿ ಸಾಂಬಾಳ-ಸನಾದಿ ಸಾಂಪ್ರದಾಯಿಕ ವಾದ್ಯಗಳ ಮೂಲಕ ಯಲ್ಲಮ್ಮದೇವಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಕರೆತಂದು ಸನ್ಮಾನಿಸಲಾಯಿತು.

ಚಿಮ್ಮಡ ವಿರಕ್ತಮಠದ ಪ್ರಭು ಶ್ರೀ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು. ನಿವೃತ್ತ ಸೈನಿಕರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಈರಪ್ಪ ತಾರದಾಳ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಸಂತೋಷ ಜಮಖಂಡಿ, ಅಪ್ಪಾಸಾಬ ಮೋಪಗಾರ, ರಮೇಶ ಪಟ್ಟಣಶೆಟ್ಟಿ, ಮಲ್ಲಪ್ಪ ಜಮಖಂಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net