ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿ ಪರಿಚಯಿಸಿ

IMG-20240901-WA0369
Published on


ಅರಸೀಕೆರೆ ಗ್ರಾಮಾಂತರ : ಶ್ರೀ ತರಳಬಾಳು ಜಗದ್ಗುರು ಆಂಗ್ಲ ಮಾಧ್ಯಮ ಶಾಲೆ ಹಾಗೂ ಸಾರ್ವಜನಿಕ ಶಾಲಾ ಶಿಕ್ಷಣ ಮತ್ತು ಶಿಕ್ಷಣ ಸಾಕ್ಷರತಾ ಇಲಾಖೆಯಿಂದ ತಾಲೂಕಿನ ಕಸಬಾ ಹೋಬಳಿಯ ಹಾರನಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.


ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ರಂಗಸ್ವಾಮಿ ಮಾತನಡಿ, ಇಂದಿನ ಆಧುನಿಕ ಯಾಂತ್ರಿಕ ಜೀವನದಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ಆಚಾರ ವಿಚಾರಗಳು ಹೇಗಿವೆ ಎಂಬುದನ್ನು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ನಮ್ಮ ಪ್ರಮುಖ ಕರ್ತವ್ಯವಾಗಿದೆ ಎಂದರು.
ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ನಾಲ್ಕು ಹಂತದಲ್ಲಿ ನಡೆಯಿತು. ಪ್ರತಿ ವಿಭಾಗದಲ್ಲಿ ವಿಜೇತರಾದ ತಾಯಿ-ಮಗುವಿಗೆ ಬಹುಮಾನ ವಿತರಣೆ ಮಾಡಲಾಯಿತು.


ಬಹುಮಾನ ಪಡೆದವರು (ಮಗು-ತಾಯಿ) : ಎಲ್‌ಕೆಜಿ : ನೂತನ್-ಭಾಗ್ಯಲಕ್ಷ್ಮೀ (ಪ್ರ), ತರಕ-ಅನಿತಾ(ದ್ವಿ), ಯಶೀತ, ಶಶಿಕಲಾ(ತೃ). ಯುಕೆಜಿ : ಇಂಪನಾ-ಸುಕನ್ಯಾ(ಪ್ರ), ಪಂಚಮಿ -ಪವಿತ್ರಾ(ದ್ವಿ), ವಿಕ್ಷಾ ಪಿ.ನಾಯಕ್-ಬಿ.ಬಿ.ಮಣಿ(ತೃ). ಒಂದನೇ ತರಗತಿ : ನೂತನ್- ಭಾಗ್ಯಲಕ್ಷ್ಮೀ (ಪ್ರ), ರೋಹಿತ್-ರಮ್ಯಾ(ದ್ವಿ), ವಿಶು-ಸ್ವಾತಿ (ತೃ). ಎರಡನೇ ತರಗತಿ : ತನ್ವಿತಾ-ಲತಾ(ಪ್ರ), ಸಾನ್ವಿ -ವೀಣಾ(ದ್ವಿ), ಹರ್ಷಿತಾ-ಕಾವ್ಯಾ(ತೃ). ಮೂರನೇ ತರಗತಿ : ದೀಕ್ಷಾ-ಆಶಾ(ಪ್ರ), ಇಂದು-ವೀಣಾ(ದ್ವಿ), ಹರ್ಷಿತಾ-ಕಾವ್ಯಾ(ತೃ). ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಯಶವಂತ್, ಮುಖ್ಯ ಶಿಕ್ಷಕ ಶೇಖರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net