ಮುಂದಿನ ಪೀಳಿಗೆಗೆ ಕನ್ನಡ ಪರಿಚಯಿಸಿ

Introduce Kannada to the next generation
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋಸರಿಯಲ್ಲಿ ನಡೆದ ‘ನಮ್ಮವರ ಹಬ್ಬ ಕನ್ನಡಿಗರ ಹಬ್ಬ’ವನ್ನು ಕನ್ನಡದ ಖ್ಯಾತ ಬರಹಗಾರ ಜಯಂತ ಕಾಯ್ಕಿಣಿ ಉದ್ಘಾಟಿಸಿದರು. ಡಾ. ರಾಣಿ ಖೇಡ್ಕರ್, ಬಸವರಾಜ ಹಿರೇಮಠ, ಬಸವರಾಜ ಪಟ್ಟಣಶೆಟ್ಟಿ, ಅಮಿತ ಇನಾಮದಾರ ಇತರರಿದ್ದಾರೆ.
Published on

ಪುಣೆ (ಮಹಾರಾಷ್ಟ್ರ): ಜಿಲ್ಲೆಯ ಪುಣ್ಯನಗರಿ ಭೋಸರಿಯ ಅಂಕುಶರಾವ ನಾಟ್ಯಗೃಹದಲ್ಲಿ ಕಳೆದ ನ. 24ರಂದು ಪ್ರತಿಷ್ಠಿತ ‘ನಮ್ಮವರು’ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ‘ನಮ್ಮವರ ಹಬ್ಬ ಕನ್ನಡಿಗರ ಹಬ್ಬ’ವನ್ನು ವಿಜೃಂಭಣೆಯಿಂದ ಆಚರಿಸಿದರು.

ಮುಖ್ಯ ಅತಿಥಿಯಾಗಿದ್ದ ಕನ್ನಡದ ಖ್ಯಾತ ಬರಹಗಾರ ಮುಂಗಾರು ಮಳೆ ಖ್ಯಾತಿಯ ಜಯಂತ ಕಾಯ್ಕಿಣಿ ಮಾತನಾಡಿ, ಹೊರನಾಡಿನಲ್ಲಿ ‘ನಮ್ಮವರು’ ಸಂಘ ಮಾಡುತ್ತಿರುವ ಕನ್ನಡ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಕನ್ನಡ ಭಾಷೆಯನ್ನು ನಾವು ಹೇಗೆ ಬಳಸಬೇಕು ಮತ್ತು ಮುಂದಿನ ಪೀಳಿಗೆಗೆ ಹೇಗೆ ಪರಿಚಯಿಸಬೇಕು ಎಂಬುದನ್ನು ಸವಿವರವಾಗಿ ವಿವರಿಸಿದರು.

ಪುಣೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಗೋಲ್ಡನ್ ಲೆಟರ್ಸ್ ಬಾಲ ವಿಕಾಸ ೌಂಡೇಷನ್ ಪಾಠಿ ಪುಸ್ತಕದ ಅಧ್ಯಕ್ಷೆ ಡಾ. ರಾಣಿ ಖೇಡ್ಕರ್, ರಕ್ಷಣಾ ಸಚಿವಾಲಯದ ನಿವೃತ್ತ ವಿಜ್ಞಾನಿ ಮತ್ತು ನಮ್ಮವರು ಸಂಘದ ಅಧ್ಯಕ್ಷ ಬಸವರಾಜ ಹಿರೇಮಠ, ಸಂಘದ ಸಕ್ರಿಯ ಸದಸ್ಯ ಬಸವರಾಜ ಪಟ್ಟಣಶೆಟ್ಟಿ, ಅಮಿತ ಇನಾಮದಾರ ವೇದಿಕೆಯಲ್ಲಿದ್ದರು.

ಪುನರುಸ್ಥಾನ ಸಮರಸತಾ ಗುರುಕುಲಮ್‌ನ ಸಂಸ್ಥಾಪಕ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಗಿರೀಶ ಪ್ರಭು, ರಕ್ಷಣಾ ಸಚಿವಾಲಯದ ನಿವೃತ್ತ ವಿಜ್ಞಾನಿ ಅಶೋಕ ನಗರಕರ, ಪುಣೆಯ ತಪಸ್ಯ ಇಂಪ್ಯಾಕ್ಟ್ ೌಂಡೇಷನ್ ಸಂಸ್ಥಾಪಕ ತಪಸ ಸೂತ್ರದಾರ, ಪುಣೆಯ ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಡಾ. ರಾಣಿ ಖೇಡ್ಕರ್ ಅವರನ್ನು ‘ಕಾಯಕ ರತ್ನ’ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಯಿತು.

ನಮ್ಮವರ ಸಂಘದ ವೀರನಗೌಡ ಪಾಟೀಲ, ಹೇಮಾ ಮಳಗಿ, ಶಾಂತಲಾ ಬಿರಾದಾರ, ವಿದ್ಯಾ ಮದಲಿ ಅವರಿಗೆ ಕನ್ನಡ ಕಲಿಕೆಗೆ ಮಾಡಿದ ಅಪಾರ ಸೇವೆಗೆ ‘ಕನ್ನಡ ಶಿಕ್ಷಣ ರತ್ನಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ನಮ್ಮವರು’ ಕುಟುಂಬದ ಸದಸ್ಯರು ಭಾರತ ದೇಶದ ವಿವಿಧ ರಾಜ್ಯಗಳ ವೇಷಭೂಷಣ ಪ್ರದರ್ಶಿಸಿದರು. ಲೇಖಕಿ ಹೇಮಾ ಮಳಗಿ ರಚಿತ ತಮ್ಮ ಹೃದಯ ಕಾದಂಬರಿಯನ್ನು ಜಯಂತ ಕಾಯ್ಕಿಣಿ ಬಿಡುಗಡೆಗೊಳಿಸಿದರು.

ಜೂನಿಯರ್ ಶಂಕರನಾಗ್ ಮಾಲತೇಶ ಕುಲಕರ್ಣಿ, ಜೂ. ಅಂಬರೀಷ್ ಲಿಂಗಾರಾಧ್ಯ ಭದ್ರಾವತಿ, ಜೂ. ವಿಷ್ಣುವರ್ಧನ್ ಬೆಂಗಳೂರಿನ ಸ್ಯಾಮ್ ವರ್ಧನ್, ಜೂ. ಎಸ್.ಪಿ. ಬಾಲಸುಬ್ರಹ್ಮಣ್ಯಂ ವಿಜಯಪುರದ ಪಾಂಡುರಂಗ ಕುಲಕರ್ಣಿ ತಮ್ಮ ಕನ್ನಡ ಹಾಡುಗಳು, ಸಂಭಾಷಣೆಯಿಂದ ಪ್ರೇಕ್ಷಕರನ್ನು ರಂಜಿಸಿದರು. ಕನ್ನಡ ಕಲಿ ಶಿಕ್ಷಕ ಸಿಬ್ಬಂದಿಯಿಂದ ‘ಪರಿವರ್ತನೆ’ ವಿಷಯದ ಮೇಲೆ ಕಿರು ನಾಟಕ ಪ್ರದರ್ಶನಗೊಂಡಿತು.

ಜಾನ್ಸಿರಾವ್, ಶಿವಾನಂದ ಪಟ್ಟಣ, ಭಾರ್ಗವ ಸಂಗಮೇಶ ಗುಲ್, ವೆಂಕಟೇಶ ಕುಲಕರ್ಣಿ, ವೇಣು ಅಚ್ಯುತ, ಸತೀಶ ಮೆಣಸಗಿ, ಮುರುಗೇಶ ಗಿರಿಸಾಗರ, ವೀರನಗೌಡ ಪಾಟೀಲ, ಪರಾಗ ಮುಳಗುಂದ, ಶರತ್ ಐರಾನಿ, ಸಂತೋಷ ಹಿರೇಮಠ, ಅಂಕಿತ, ಜಯತೀರ್ಥ ನಾಡಗೌಡ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

1200ಕ್ಕಿಂತ ಅಧಿಕ ಕನ್ನಡಿಗರು ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಉತ್ತರ ಕರ್ನಾಟಕ ಶೈಲಿನ ಭೋಜನ ವಿತರಿಸಲಾಯಿತು. ಅವಿನಾಶ ಹೊಸಮನಿ, ಸಂಸ್ಕೃತಿ ಚೌಗಲೆ, ಬಿಂದು ಮಾಧವ ದೇಸಾಯಿ ನಿರೂಪಿಸಿದರು. ಭಾರ್ಗವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net