

ಮಡಿಕೇರಿ: ಮರಗೋಡು ಸ್ಟೋರ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ ನ೫, ೬ ರಂದು ಮರಗೋಡು ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ’ಇಂಟರ್ ವಿಲೇಜ್ ಚಾಂಪಿಯನ್ ಶಿಪ್ ೨೦೨೨’ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಕೋಚನ ಅನುಪ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಗೋಡು, ಹೊಸ್ಕೇರಿ, ಕಟ್ಟೆಮಾಡು, ಐಕೊಳ, ಅರೆಕಾಡು ಗ್ರಾಮಸ್ಥರ ಪುರುಷರಿಗೆ ಫುಟ್‌ಬಾಲ್, ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್, ಕಬಡ್ಡಿ, ಹಗ್ಗಜಗ್ಗಾಟ, ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆಗಳು ಗ್ರಾಮವಾರು ನಡೆಯಲಿದೆ. ಗ್ರಾಮದ ವಿವಿಧ ಸಮುದಾಯದ ಜನರನ್ನು ಒಗ್ಗೂಡಿಸುವ ಮತ್ತು ಹೊಸ ಕ್ರೀಡಾಪಟುಗಳನ್ನು ಗುರುತಿಸುವ ಸಲುವಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮದ ಸ್ಪರ್ಧಿಗಳು ಅವರವರ ಗ್ರಾಮಕ್ಕೆ ಭಾಗವಹಿಸಬೇಕು. ಪ್ರತಿ ಪಂದ್ಯಾಟಕ್ಕೆ ಅಂಕ ನೀಡಿ, ಅತಿಹೆಚ್ಚು ಅಂಕ ಪಡೆದ ತಂಡ ಚಾಂಪಿಯನ್ ತಂಡವಾಗಿ ಘೋಷಣೆ ಮಾಡಲಾಗುವುದು. ಕ್ರಮವಾಗಿ ಮೊದಲನೇ ಬಹುಮಾನ ೫೦,೦೦೦, ೨ನೇ ೪೦,೦೦೦, ೩ನೇ ತೃತೀಯ ೩೦,೦೦೦, ೪ನೇ ೨೦,೦೦೦, ೫ನೇ ಬಹುಮಾನ ೧೦,೦೦೦ ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಕ್ರೀಡಾಕೂಟದ ಅತ್ಯುತ್ತಮ ಮಹಿಳಾ ಮತ್ತು ಪುರುಷ ಆಟಗಾರರನ್ನು ಗುರುತಿಸಿ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಉಪಾಧ್ಯಕ್ಷ ಮಂದ್ರೀರ ಮೋಹನ್ ದಾಸ್, ಕಾರ್ಯದರ್ಸಿ ಪಾಂಡನ ನಿಶಾಂತ್, ಖಜಾಂಚಿ ಬಡುವಂಡ್ರ ಸುಜಯ್, ಸ್ಥಾಪಕ ಅಧ್ಯಕ್ಷ ಕೋಚನ ಲವೀನ್ ಇದ್ದರು.