ಕೇಜ್ರಿವಾಲ್ ಬಿಡುಗಡೆಗೆ ಮಧ್ಯ ಪ್ರವೇಶಿಸಿ

31-03-Shiva-1
ದೆಹಲಿ ಸಿಎಂ ಕೇಜ್ರಿವಾಲ್ ಬಿಡುಗಡೆಗೆ ರಾಷ್ಟ್ರಪತಿ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಜಿಲ್ಲಾ ಘಟಕದಿಂದ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಭಾನುವಾರ ಮನವಿ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಡಿ.ವೀರೇಶಕುಮಾರ, ಪದಾಕಾರಿಗಳಾದ ಸೈಯದ್ ನುಸ್ರತ್ ಅಲಿ, ಮಕ್ಬೂಲ್ ಪಾಷಾ, ಆನಂದಕುಮಾರ, ಸೈಯದ್ ಶೇಕ್ಷಾವಲಿ, ಡಾ.ವಾಹೀದ್, ಅಬ್ದುಲ್ ಖಾದರ್, ಸುನೀಲ್, ಸೈಯದ್ ಬದ್ರುಲ್, ಈರೇಶ ಇದ್ದರು.
Published on

ರಾಯಚೂರು: ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ರನ್ನು ಬಂಸಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರೋ ನಡೆಯಾಗಿದ್ದು, ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಆಮ್ ಆದ್ಮಿ ಜಿಲ್ಲಾ ಘಟಕದಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಕೇಜ್ರಿವಾಲ್ ಭವಿಷ್ಯದಲ್ಲಿ ತಮಗೆ ಎದುರಾಳಿ ಆಗಬಹುದು ಎಂದು ಪ್ರಧಾನಿ ಮೋದಿ ಎದುರಾಳಿಗಳನ್ನು ಹತ್ತಿಕ್ಕುವ ಸರ್ವಾಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.
ಪ್ರಧಾನಿ ಮೋದಿ ಚುನಾವಣೆ ಆಯೋಗದ ಮೇಲೆ ಹಿಡಿತ ಹೊಂದಿರುವುದು ಕಳವಳಕಾರಿ ವಿಚಾರವಾಗಿದೆ. ಅಬಕಾರಿ ನೀತಿ ಹಗರಣದಲ್ಲಿ ಎಎಪಿ ಮುಖಂಡರು ಭಾಗಿಯಾಗಿದ್ದಾರೆ ಎಂದು ನಿರಂತರವಾಗಿ ಕೇಂದ್ರ ಸರ್ಕಾರ ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಾ ಬಂದಿದ್ದಾರೆ.
ಪಕ್ಷದ ನಾಯಕರು ಸತ್ಯದ ಪರವಾಗಿ ದೃಢವಾಗಿ ನಿಂತಿದ್ದು, ಬಿಜೆಪಿ ಕೊನೆಯ ಅಸ ಎಂಬಂತೆ ಲೋಕಸಭೆ ಚುನಾವಣೆಗೆ ಕೆಲವು ದಿನಗಳು ಬಾಕಿಯಿರುವಾಗ ಅರವಿಂದ ಕೇಜ್ರಿವಾಲ್‌ರನ್ನು ಬಂಸಲಾಗಿದೆ. ಇದು ದೆಹಲಿ ಸರ್ಕಾರವನ್ನು ಕಟ್ಟಿ ಹಾಕುವ ಕುತಂತ್ರವಾಗಿದೆ.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಸಿದಂತೆ ಎರಡು ವರ್ಷಗಳಿಂದ ನಿರಂತರವಾಗಿ ತನಿಖೆ ನಡೆಯುತ್ತಿದ್ದು, ಇದುವರೆಗೂ ಅಕ್ರಮ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಕೂಡಲೇ ಕೇಜ್ರಿವಾಲ್ ಬಿಡುಗಡೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಡಿ.ವೀರೇಶಕುಮಾರ, ಪದಾಕಾರಿಗಳಾದ ಸೈಯದ್ ನುಸ್ರತ್ ಅಲಿ, ಮಕ್ಬೂಲ್ ಪಾಷಾ, ಆನಂದಕುಮಾರ, ಸೈಯದ್ ಶೇಕ್ಷಾವಲಿ, ಡಾ.ವಾಹೀದ್, ಅಬ್ದುಲ್ ಖಾದರ್, ಸುನೀಲ್, ಸೈಯದ್ ಬದ್ರುಲ್, ಈರೇಶ, ಕೃಷ್ಣ, ಸಂಗಪ್ಪ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net